ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಲಯ ವ್ಯಾಪ್ತಿಯ ಕಳಾಸಿಪಾಳ್ಯ ಮಾರುಕಟ್ಟೆಯಲ್ಲಿ ಟ್ರಕ್(ಲಾರಿ) ಮೂಲಕ ಅಂಗಡಿಗಳಿಗೆ ಸಾಗಿಸುತ್ತಿದ್ದ 25 ಕೆ.ಜಿ ತೂಕದ 177 ಬ್ಯಾಗ್(ಚೀಲ)ಗಳನ್ನು ಪಾಲಿಕೆಯ ವಶಕ್ಕೆ ಪಡೆಯಲಾಗಿದೆ.
ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಾಗಿಸಲು ಉಪಯೋಗಿಸುತ್ತಿದ್ದ ಟ್ರಕ್ ನೋಂದಣಿ ಸಂಖ್ಯೆ ಖಿಓ24ಂಅ7965 ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ 7.30ರ ಸುಮಾರಿಗೆ ಅಪಾರ ಪ್ರಮಾಣದ ನಿಷೇಧಿತ ಪ್ಲಾಸ್ಟಿಕ್ ಸಾಗಿಸುತ್ತಿರುವುದು ಪತ್ತೆಯಾಗಿದೆ. ಈ ಸಂಬAಧ ಮಾರ್ಷಲ್‌ಗಳು ಟ್ರಕ್ ಅನ್ನು ಪರಿಶೀಲನೆ ನಡೆಸಿದ ವೇಳೆ 25ಕೆಜಿ ತೂಕದ 177 ಚೀಲಗಳೆಲ್ಲವೂ ನಿಷೇಧಿತ ಪ್ಲಾಸ್ಟಿಂಗ್ ಎಂಬುದನ್ನು ಗಮನಿಸಿ ಎಲ್ಲಾ ಪ್ಲಾಸ್ಟಿಕ್ ಉತ್ಪನ್ನಗಳನ್ನು ಪಾಲಿಕೆ ವಶಕ್ಕೆ ಪಡೆಯಲಾಗಿರುತ್ತದೆ.
ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ ಹಾಗೂ ಸಾಗಾಣೆಯ ಬಗ್ಗೆ ಟ್ರಕ್ ಚಾಲಕನನ್ನು ವಿಚಾರಿಸಿದಾಗ ಎಸ್‌ಎಸ್‌ವಿ ಟ್ರಾನ್ಸ್ಪೋರ್ಟ್, ಅಹಮದಾಬಾದ್ ಜಿಲ್ಲೆ, ಗುಜರಾತ್‌ನಿಂದ ಬಂದಿದ್ದು, ಪ್ಲಾಸ್ಟಿಕ್ ಉತ್ಪನ್ನಗಳನ್ನು ಎಸ್.ವಿ ರಸ್ತೆ, ಕಲಾಸಿಪಾಳ್ಯ, ಕೆ.ಆರ್ ಮಾರುಕಟ್ಟೆ ಹಾಗೂ ಇನ್ನಿತರೆ ಮಾರುಕಟ್ಟೆಯ ವಿವಿಧ ಅಂಗಡಿಗಳಿಗೆ ವಿತರಣೆ ಮಾಡುವುದಾಗಿ ತಿಳಿಸಿರುತ್ತಾರೆ.
ಟ್ರಕ್ ಈಗ ಪಾಲಿಕೆಯ ಅಧೀನದಲ್ಲಿದ್ದು, ಲಾರಿ ಮಾಲೀಕರು ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ಉಪಯೋಗಿಸುತ್ತಿದ್ದವರ ವಿರುದ್ಧ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ 2016 ಮತ್ತು ರಾಜ್ಯ ಸರ್ಕಾರದ ಅಧಿಸೂಚನೆ ದಿನಾಂಕ: 11.03.2016ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೂಚಿಸಿರುತ್ತದೆ. ಅದರಂತೆ ಪಾಲಿಕೆಯ ವತಿಯಿಂದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರಾದ ಪರಶುರಾಮ್ ಶಿನ್ನಾಳ್ಕರ್ ರವರು ತಿಳಿಸಿರುತ್ತಾರೆ.
Kshetra Samachara
31/05/2022 10:16 am