ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಮಳೆ ಬಿಡುವು ಕೊಟ್ಟಿದೆ. ರಾಜಕಾಲುವೆ ಒತ್ತುವರಿಯಿಂದ ಪ್ರವಾಹಗಳು ಉಂಟಾಗುತ್ತಿದೆ. ಇದೀಗ ನಗರದಲ್ಲಿ ಮತ್ತೆ ಜೆಸಿಬಿ ಘರ್ಜಿಸುವ ಸಾಧ್ಯತೆ ಇದೆ.
ಸಕಾಲದಲ್ಲಿ ಒತ್ತುವರಿ ತೆರವಿಗೆ ಕ್ರಮ ತೆಗೆದುಕೊಳ್ಳದಿದ್ದರೆ ಮುಂದೆ ಮಳೆ ಬಂದಾಗ ಪ್ರವಾಹ ಖಚಿತ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದು, ತೆರವು ಕಾರ್ಯಾಚರಣೆ ಆರಂಭವಾಗಲಿದೆ ಎಂದು ಸುಳಿವು ನೀಡಿದ್ದಾರೆ.
ನಗರದಲ್ಲಿ 2,626 ಪ್ರದೇಶಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ. ಈಗಾಗಲೇ 696 ಪ್ರಕರಣಗಳ ವ್ಯಾಜ್ಯ ಕೋರ್ಟ್ನಲ್ಲಿದೆ. ಆದಷ್ಟು ಬೇಗ ಪ್ರಕರಣ ಇತ್ಯರ್ಥಗೊಳಿಸಿ ತೆರವು ಮಾಡಲಾಗುವುದು.ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿರುವ 714 ಕಟ್ಟಡಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲಿಯೇ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಸಿದ್ಧತೆ ಕೈಗೊಂಡಿದ್ದೇವೆ. ಒಟ್ಟು 2,626 ಕಡೆ ರಾಜಕಾಲುವೆ ಜಾಗ ಕಬಳಿಕೆಯಾಗಿದೆ. ಈವರೆಗೆ 1890 ಸ್ಥಳಗಳಲ್ಲಿ ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಪ್ರತಿಕ್ರಿಯಿಸಿದರು.
Kshetra Samachara
23/05/2022 08:06 pm