ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಮುನ್ನ ವಾರ್ಡ್ ಮರುವಿಂಗಡಣೆಗೆ ಬಹುತೇಕ ಪೂರ್ಣಗೊಂಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಮ್ಮ ವಕೀಲರ ಬಳಿ ಮಾಹಿತಿ ಪಡೆದುಕೊಂಡಿದ್ದೀವೆ. ನಮಗೆ ವಾರ್ಡ್ ಮರುವಿಂಗಡಣೆ ಮಾತ್ರ ಮಾಡುವ ಕೆಲಸ ಇದೆ. ಹಾಗಾಗಿ, ಮೀಸಲಾತಿ ಸರ್ಕಾರದ ಹಂತದಲ್ಲಾಗುತ್ತೆ. ಈಗ ಸುಪ್ರೀಂ 8 ವಾರ ಸಮಯ ಕೊಟ್ಟಿದೆ ಆ ಸಮಯದಲ್ಲಿ ನಾವು ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದರು.
ಸಾಕಷ್ಟು ಸರ್ಕಾರದ ಹಂತದಲ್ಲಿ ನಿರ್ಧಾರ ಕೈಗೊಳ್ಳಬೇಕಿದೆ. ವಾರ್ಡ್ ಮರು ವಿಂಗಡಣೆ ಬಹುತೇಕ ಪೂರ್ಣಗೊಂಡಿದೆ. ಎಲ್ಲವು ಮಾನದಂಡಗಳ ಪ್ರಕಾರವೇ ಆಗಲಿದೆ ಎಂದು ಹೇಳಿದರು.
Kshetra Samachara
20/05/2022 08:07 pm