ಆನೇಕಲ್ : ಪಂಚಾಯಿತಿಯ ನಡವಳಿ (ಪಂಚಾಯಿತಿಯ ರಿಸರ್ವೇಷನ್ ಬುಕ್ ) ಪುಸ್ತಕದಲ್ಲಿ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ಬಾರದೆ ವೆಂಚುರಾ ಮೈನಿಂಗ್ಸ್ ಜಲ್ಲಿ ಕ್ರಷರ್ ಗೆ ಅನುಮತಿ ನೀಡಿದ ಕಾರಣಕ್ಕೆ ಇಂಡ್ಲವಾಡಿ ಗ್ರಾಮ ಪಂಚಾಯಿತಿ ಪಿಡಿಓ ಅಧಿಕಾರಿಗೆ ಚುನಾಯಿತ ಪ್ರತಿನಿಧಿಗಳು ಸಾಮಾನ್ಯ ಸಭೆಯಲ್ಲಿ ಪಿಡಿಒ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ದೃಶ್ಯಾವಳಿಗಳು ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯ.
ಹೌದು ತಿಂಗಳಿಗೊಮ್ಮೆ ನಡೆಯುವ ಸಾಮಾನ್ಯ ಸಭೆಯ ನಡಾವಳಿ ಪುಸ್ತಕದಲ್ಲಿ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ಬಾರದೆ ತುರ್ತು ಸಭೆಯಲ್ಲಿ ಚರ್ಚಿಸಿ ವೆಂಚುರಾ ಮೈನಿಂಗ್ಸ್ ಜಲ್ಲಿ ಕ್ರಷರ್ ಗೆ
ಅನುಮತಿ ನೀಡಲಾಗಿದೆ ಎಂದು ರೆಸೋಲ್ಯೂಷನ್ ಬುಕ್ ನಲ್ಲಿ ನಮೂದಿಸಲಾಗಿದೆ.
ಇನ್ನು ಚುನಾಯಿತ ಪ್ರತಿನಿಧಿಗಳು ಮೀಟಿಂಗ್ ಮಾಡುವ ಉದ್ದೇಶವೇ ಬೇರೆ ಪುಸ್ತಕದಲ್ಲಿ ಬರೆಯುವುದೇ ಬೇರೆ ಚರ್ಚೆ ಆಗದಿರುವ ವಿಷಯಗಳ ಬಗ್ಗೆ ತುರ್ತು ಸಭೆಯಲ್ಲಿ ಚರ್ಚೆಯಾಗಿದೆ ಎಂದು ನಮೂದಿಸಿದ್ದಾರೆ ಹೀಗಾಗಿ ಚುನಾಯಿತ ಪ್ರತಿನಿಧಿಗಳು ಫುಲ್ ಗರಂ ಆಗಿದ್ದಾರೆ.
Kshetra Samachara
06/05/2022 10:58 pm