ಬೆಂಗಳೂರು - ಟ್ರಾಫಿಕ್ ಸಿಗ್ನಲ್ ಗಳಲ್ಲಿ ಎಂಜಿನ್ ಆಫ ಮಾಡದಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಎಲ್ಲಾ ಮಿಡಿ ಬಸ್ ಚಾಲಕರಿಗೆ ಸೂಚನೆ ನೀಡಿದೆ.
ಕಳೆದ ಮೂರು ತಿಂಗಳಲ್ಲಿ ಬೆಂಗಳೂರಲ್ಲಿ ಅಶೋಕ ಲೇಲ್ಯಾಂಡ್ ಮಿಡಿ ಬಸ್ ಗಳಿಗೆ ಬೆಂಕಿ ಹತ್ತಿಕೊಂಡ ಪ್ರಕರಣಗಳ ಪ್ರಾಥಮಿಕ ತನಿಖೆ ಬಳಿಕ ಎಂಜಿನ್ ಭಾಗದಿಂದ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ವರದಿ ಹಿನ್ನೆಲೆಯಲ್ಲಿ ಬಿಎಂಟಿಸಿ ಈ ನಿರ್ದೇಶನ ನೀಡಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ತಪ್ಪಿಸಲು ಪ್ರತಿ ಸಿಗ್ನಲ್ ಬಳಿ ಬಸ್ ಎಂಜಿನ್ ಆಫ್ ಹಾಗೂ ಆನ್ ಮಾಡದಂತೆ ಕಠಿಣವಾದ ಸೂಚನೆ ಬಸ್ ಡ್ರೈವರ್ ಗಳಿಗೆ ನೀಡಲಾಗಿದೆ.
ಈ ಹಿಂದೆ ಡಿಸೇಲ್ ಉಳಿತಾ ಯಕ್ಕಾಗಿ ಸಿಗ್ನಲ್ ನಲ್ಲಿ ಬಸ್ ಎಂಜಿನ್ ಆಫ್ ಮಾಡುವಂತೆ ಬಿಎಂಟಿಸಿ ಬಸ್ ಚಾಲಕರಿಗೆ ಸೂಚನೆ ನೀಡಿತ್ತು.ಇದೀಗ ಆ ಅದೇಶವನ್ನು ವಾಪಸ್ ಪಡೆದಿದೆ.
Kshetra Samachara
28/04/2022 12:37 pm