ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸರ್ಕಾರದ ವಿರುದ್ಧ ಬಿಸಿಯೂಟ ಕಾರ್ಯಕರ್ತರ ಹೋರಾಟ

ಬೆಂಗಳೂರು: ಬಿಸಿಯೂಟ ಕಾರ್ಯಕರ್ತರು ಇಂದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು. ಅಕ್ಷರ ದಾಸೋಹ ನೌಕರ ಸಂಘ ನೇತೃತ್ವದಲ್ಲಿ ಹೋರಾಟ ನಡೆಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಕಚೇರಿ ಮುಂದೆ ಧರಣಿ ಕುಳಿತರು. ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ನಡೆದ ಈ ಹೋರಾಟದಲ್ಲಿ ನೂರಾರು ಸಂಖ್ಯೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಭಾಗಿ ಆಗಿದ್ದರು.

60 ವರ್ಷ ಮೇಲ್ಪಟ್ಟ ಬಿಸಿಯೂಟ ಕಾರ್ಯಕರ್ತೆರ ನಿವೃತ್ತಿ ವಿಚಾರದಲ್ಲಿ ಸರ್ಕಾರದ ಆದೇಶ ಅಮಾನವೀಯವಾಗಿಯೇ ಇದೆ. 2001-02 ರಲ್ಲಿ ಅಡುಗೆ ಕೆಲಸಕ್ಕೆ ಸೇರ್ಪಡೆ ವೇಳೆ ವಿದ್ಯಾಭ್ಯಾಸ ಹಾಗೂ ವಯಸ್ಸಿನ ಅರ್ಹತೆ ಮಾತ್ರ ಇತ್ತು. ಅದರಲ್ಲಿ ನಿವೃತ್ತಿ ವಯಸ್ಸಿನ ಸರ್ಕಾರದ ಕೈಪಿಡಿ ಇರಲಿಲ್ಲ.

2016 ರಿಂದಲೂ ವಯಸ್ಸಿನ ಆಧಾರದಲ್ಲಿ ನಿವೃತ್ತಿ ಸೌಲಭ್ಯ ಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು. ಈ ವಿಷಯಗಳ ಬಗ್ಗೆ ಸಚಿವರ ಮಟ್ಟದಲ್ಲಿ ಹಲವಾರು ಭಾರಿ ಸಭೆ ಆಗಿವೆ. 12,000 ನೌಕರರ ಕೆಲಸವನ್ನು ಯಾವುದೇ ನಿವೃತ್ತಿ ಸೌಲಭ್ಯ ಇಲ್ಲದೆ ತೆಗೆದು ಹಾಕಲು ಮುಂದಾಗಿದೆ. ಹೀಗಾಗಿ ಈ ಆದೇಶವನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ನಿವೃತ್ತಿ ನಿಗದಿ ಮಾಡಿದ್ರೆ ನೌಕರರಿಗೆ ನಿವೃತ್ತಿ ವೇತನ 1 ಲಕ್ಷ ಕೊಡಬೇಕೆಂದು ಒತ್ತಾಯಿಸಿದರು.

ನವೀನ ಪಬ್ಲಿಕ್ ನೆಕ್ಸ್ಟ್

ಬೆಂಗಳೂರು

Edited By :
PublicNext

PublicNext

18/04/2022 06:25 pm

Cinque Terre

49.61 K

Cinque Terre

1

ಸಂಬಂಧಿತ ಸುದ್ದಿ