ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸರ್ಕಾರಿ ನೌಕರನ ಕಳ್ಳಾಟ: ಪೆನ್ಷನ್ ಹಣದೊಂದಿಗೆ ಗುತ್ತಿಗೆ ಕೆಲಸ

ಆನೇಕಲ್ : ಸರ್ಕಾರಿ ಕೆಲಸದಿಂದ ನಿವೃತ್ತಿಹೊಂದಿ ಒಂದು ವರ್ಷ ಕಳೆದರೂ ಕೂಡ ಗುತ್ತಿಗೆ ಆಧಾರದ ಮೇಲೆ ಅದೇ ಕೆಲಸಕ್ಕೆ ತೆಗೆದುಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸದ್ಯ ಅವರನ್ನು ಕೆಲಸದಿಂದ ವಜಾ ಮಾಡಿ ಉದ್ಯೋಗವಿಲ್ಲದ ಹುಡುಗನಿಗೆ ಅವಕಾಶ ಕೊಡುವಂತೆ ಸಮಾಜಸೇವಕ ಗೌತಮ್ ವೆಂಕಿ ಆಗ್ರಹಿಸಿದ್ದಾರೆ.

ಹೌದು ಇಲ್ಲಿನ ಆನೇಕಲ್ ತಾಲ್ಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಫೀಕ್ ಅಹಮದ್ ಸರ್ಕಾರಿ ಡಿ ನೌಕರ ಕಳೆದ ಒಂದು ವರ್ಷದ ಹಿಂದೆ ನಿವೃತ್ತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ರಫೀಕ್ ಗೆ ಸರ್ಕಾರದಿಂದ 20000 ಹಣ ಪೆನ್ಷನ್ ನೀಡಲಾಗುತ್ತಿದೆ. ಆದರೆ ಈ ನೌಕರ ಮತ್ತೆ ಅಲ್ಲಿಯೇ ಅದೇ ಗುತ್ತಿಗೆ ಆಧಾರದ ಮೇಲೆ ಕೆಲಸ ಮುಂದುವರೆಸಿದ್ದಾನೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತು ಅವರನ್ನು ವಜಾಗೊಳಿಸಿ ಹೊಸಬರಿಗೆ ಅವಕಾಶ ನೀಡಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು..

Edited By : Manjunath H D
PublicNext

PublicNext

05/04/2022 07:17 am

Cinque Terre

26.43 K

Cinque Terre

2

ಸಂಬಂಧಿತ ಸುದ್ದಿ