ಬೆಂಗಳೂರು : -ಪ್ರತಿ ಲೀಟರ್ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಕರ್ನಾಟಕ ಹಾಲು ಒಕ್ಕೂಟ ಚಿಂತನೆ ನಡೆಸಿದೆ. ಈ ಬಗ್ಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿ ಚರ್ಚಿಸಿ ಅಂತಿಮ ನಿರ್ಧಾರ ಮಾಡಲು ಕೆಎಂಎಫ್ ನಿರ್ಧರಿಸಿದೆ.
ಸದ್ಯ ಪ್ರತಿ ಲೀಟರ್ ಹಾಲಿನ ಬೆಲೆ 37 ರೂ. ಇದ್ದು, 40 ರೂ ಏರಿಕೆ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಿರುವ ಕೆಎಂಫ್ ನಿರ್ಧಾರಕ್ಕೆ ಸಿಎಂ ಅಸ್ತು ಎನ್ನುವರೇ ಎನ್ನುವುದನ್ನು ಕಾದನೋಡಬೇಕಿದೆ.
ಇನ್ನು ಕರ್ನಾಟಕ ಹಾಲು ಒಕ್ಕೂಟದ ಸಾಮಾನ್ಯ ಸಭೆಯಲ್ಲಿ ದರ ಏರಿಕೆ ಬಗ್ಗೆ ಪ್ರಸ್ತಾಪಿಸಿದ್ದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಇಂದು ಇದೇ ವಿಚಾರವನ್ನು ಸಿಎಂ ಮುಂದಿಡಲಿದ್ದಾರೆ.
Kshetra Samachara
17/01/2022 01:11 pm