ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಸ್ಪತ್ರೆಗಳಿಗೆ ದಾಖಲಾಗಲು ಸರ್ಕಾರದಿಂದ ಹೊಸ ಗೈಡ್ ಲೈನ್ಸ್

ಬೆಂಗಳೂರು: ಆಸ್ಪತ್ರೆಗಳಿಗೆ ದಾಖಲಾಗಲು ಕರ್ನಾಟಕ ರಾಜ್ಯ ಸರ್ಕಾರದಿಂದ ಗೈಡ್​ಲೈನ್ಸ್​ ಬಿಡುಗಡೆಗೊಳಿಸಲಾಗಿದೆ. ಮುಂದಿನ 2 ವಾರದವರೆಗೆ ಅನ್ವಯವಾಗುವಂತೆ ಸರ್ಕಾರ ಆದೇಶ ನೀಡಿದೆ. ತುರ್ತು ಆರೈಕೆ, ಚಿಕಿತ್ಸೆ ಅಗತ್ಯವಿದ್ದರಷ್ಟೆ ಆಸ್ಪತ್ರೆಗಳಿಗೆ ತೆರಳಬೇಕು. ಸೌಮ್ಯ ಲಕ್ಷಣಗಳಿದ್ದರೆ ಆಸ್ಪತ್ರೆಗಳಿಗೆ ಭೇಟಿ ನೀಡದಂತೆ ಸಲಹೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಜನದಟ್ಟಣೆ ತಪ್ಪಿಸಲು ರಾಜ್ಯ ಸರ್ಕಾರದಿಂದ ಆದೇಶ ನೀಡಲಾಗಿದೆ.

ಹಲ್ಲು ನೋವು, ತಲೆ ನೋವು ಇತ್ಯಾದಿ ಸಮಸ್ಯೆಗಳಿದ್ದರೆ ಬೇಡ. ಜನರು ಆಸ್ಪತ್ರೆಗೆ ಹೋಗದಂತೆ ರಾಜ್ಯ ಸರ್ಕಾರದಿಂದ ಮನವಿ ಮಾಡಿದೆ. ತುರ್ತು ಪರಿಸ್ಥಿತಿಯಲ್ಲಷ್ಟೆ ಆಸ್ಪತ್ರೆಗೆ ತೆರಳಲು ಸರ್ಕಾರ ಕೇಳಿದೆ.

ಹೊರರೋಗಿ ವಿಭಾಗಕ್ಕೆ ಬರುವವರಲ್ಲಿ ಹೆಚ್ಚೆಚ್ಚು ಸೋಂಕು ಪತ್ತೆ ಆಗುತ್ತಿದೆ. ಹೊರರೋಗಿ ವಿಭಾಗದಲ್ಲಿ ಜನ ಗುಂಪು ಸೇರದಂತೆ ಎಚ್ಚರವಹಿಸಿ ಎಂದು ಖಾಸಗಿ ಆಸ್ಪತ್ರೆಗಳಿಗೂ ರಾಜ್ಯ ಸರ್ಕಾರದಿಂದ ತಾಕೀತು ಹಾಕಲಾಗಿದೆ.

Edited By :
PublicNext

PublicNext

16/01/2022 12:50 pm

Cinque Terre

20.52 K

Cinque Terre

0

ಸಂಬಂಧಿತ ಸುದ್ದಿ