ವರದಿ: ಗಣೇಶ್ ಹೆಗಡೆ
ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ಸಾರಿಗೆ ನೌಕರರಿಗೆ ಕೆಎಸ್ ಆರ್ ಟಿಸಿ ಬಿಗ್ ಶಾಕ್ ನೀಡಿದೆ!
ಸಾರಿಗೆ ನೌಕರರ ಧರಣಿಯ ವೇಳೆ ವಜಾಗೊಂಡ 4200 ನೌಕರರಿಗೆ ಕೆಲಸ ಇಲ್ಲದ ತಲೆನೋವಿನ ಜತೆಗೇ ಇದ್ದ ಉಚಿತ ಪ್ರಯಾಣದ ಪಾಸ್ ನ್ನೂ ಕೆಎಸ್ ಆರ್ ಟಿಸಿ ಕಸಿದುಕೊಳ್ಳಲು ಮುಂದಾಗಿದೆ.
ಪ್ರತಿವರ್ಷದ ರಿನೀವಲ್ ಅನ್ನು ವಜಾಗೊಂಡ ನೌಕರರಿಗೆ ಮಾಡದಂತೆ ಮೇಲಧಿಕಾರಿಗಳಿಂದ ಆದೇಶ ಬಂದಿದೆಯಂತೆ !?
'ಪಬ್ಲಿಕ್ ನೆಕ್ಸ್ಟ್' ಗೆ ಸಿಕ್ಕಿರುವ ಅಧಿಕೃತ ಮಾಹಿತಿ ಪ್ರಕಾರ ವಜಾಗೊಂಡ ನೌಕರರ ಪಾಸ್ ರಿನೀವಲ್ ಮಾಡದಿರಲು ಕೆಎಸ್ ಆರ್ ಟಿಸಿ ಅಧಿಕಾರಿಗಳು ನಿರ್ಧರಿಸಿರೋದು ತಿಳಿದು ಬಂದಿದೆ.
ಈ ಮೂಲಕ ನಿಗಮ 4200 ವಜಾ ನೌಕರರಿಗೆ ಸಿಗುತ್ತಿದ್ದ ಒಂದೊಂದೇ ಸೌಲಭ್ಯ ಕಿತ್ತುಕೊಳ್ತಿದೆ. ಕೆಲಸ ಇಲ್ಲದ ಪರಿಸ್ಥಿತಿಯಲ್ಲಿ ಈ ನಿರ್ಧಾರ ಬೇಕಿತ್ತಾ ಎಂಬ ಚರ್ಚೆಯೂ ಶುರುವಾಗಿದೆ.
PublicNext
01/01/2022 06:18 pm