ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಖ್ಯ ಅಭಿಯಂತರ ಹುದ್ದೆಯಿಂದ ಪ್ರಹ್ಲಾದ್‍ ಗೆ ಹಿಂಬಡ್ತಿ

ಬೆಂಗಳೂರು - ಹಲವಾರು ಗಂಭೀರ ಆರೋಪಗಳಿಗೆ ಗುರಿಯಾಗಿರುವ ಮುಖ್ಯ ಅಭಿಯಂತರ ಬಿ.ಎಸ್.ಪ್ರಹ್ಲಾದ್ ಅವರಿಗೆ ನೀಡಲಾಗಿದ್ದ ಮುಂಬಡ್ತಿ ಹಾಗೂ ಎರಡು ಇಲಾಖೆಗಳ ಸಿಇ ಹುದ್ದೆಗಳಿಂದ ಬಿಡುಗಡೆಗೊಳಿಸುವಂತೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಹೈಕೋರ್ಟ್ ನ್ಯಾಯಾಲಯದ ಆದೇಶದಂತೆ ಪ್ರಹ್ಲಾದ್ ಅವರಿಗೆ ಬಿಬಿಎಂಪಿಯ ಎರಡು ವಿಭಾಗಗಳಲ್ಲಿ ನೀಡಲಾಗಿದ್ದ ಸಿಇ ಹುದ್ದೆಗಳಿಂದ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಬಿಬಿಎಂಪಿ ನಡಾವಳಿ ಪತ್ರ ಬರೆದಿದೆ. ಪ್ರಹ್ಲಾದ್ ಅವರಿಗೆ ಸಂಬಂಧಿಸಿದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಎನ್.ಆರ್.ರಮೇಶ್ ಅವರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ ಪ್ರಹ್ಲಾದ್ ವಿರುದ್ಧ ಕ್ರಮ ಕೈಗೊಂಡು ಸರ್ಕಾರಕ್ಕೆ ಎರಡು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು.ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಸರ್ಕಾರ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಅಧಿಕೃತ ಜ್ಞಾಪನಾಪತ್ರ ರವಾನಿಸಿತ್ತು.

ಹೀಗಾಗಿ ಮುಖ್ಯ ಆಯುಕ್ತರು ಸರ್ಕಾರದ ಆದೇಶದಂತೆ ಪ್ರಹ್ಲಾದ್ ಅವರ ಮುಂಬಡ್ತಿ ಹಿಂಪಡೆಯುವಂತೆ ಹಾಗೂ ಹಲವಾರು ಹಗರಣಗಳಲ್ಲಿ ಭಾಗಿಯಾಗಿರುವ ಪ್ರಹ್ಲಾದ್ ಅವರು ಎರಡು ಇಲಾಖೆಗಳ ಮುಖ್ಯ ಅಭಿಯಂತರ ಹುದ್ದೆಗಳಿಂದ ಬದಲಿಸುವಂತೆ ನಡಾವಳಿ ಪತ್ರ ಬರೆದಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

06/12/2021 12:25 pm

Cinque Terre

744

Cinque Terre

0

ಸಂಬಂಧಿತ ಸುದ್ದಿ