ಬೆಂಗಳೂರು: ರಾಜಾಜಿನಗರದಲ್ಲಿ ಶುದ್ದೀಕರಿಸುವ ಯಂತ್ರಗಳ ಪರೀಕ್ಷಾ ಕೇಂದ್ರವನ್ನು ಸಚಿವ ಸಿ.ಎನ್.ಅಶ್ವಥ್ ನಾರಾಯಣ್ ಉದ್ಘಾಟಸಿದ್ರು.
ನಂತರ ಮಾತನಾಡಿದ ಅವರು, ಪ್ರಪಂಚದಲ್ಲಿ ನೀರು ಹೇರಳವಾಗಿದೆ. ಕುಡಿಯಲು ಯೋಗ್ಯವಾದ ನೀರು ಸಿಗುವುದು ಕಷ್ಟ. ನೀರು ಕಲುಷಿತವಾಗಿದ್ದರೆ, ಮನುಷ್ಯನ ಆರೋಗ್ಯ ಹಾಳಾಗುತ್ತದೆ.
ಶೇಕಡ 90 ರಷ್ಟು ರೋಗಗಳು ಕಲುಷಿತ ನೀರಿನಿಂದ ಬರುತ್ತದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಹಳ್ಳಿ,ಪಟ್ಟಣ ಪ್ರದೇಶದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಸ್ಥಾಪಿಸಿದೆ. ಆರೋಗ್ಯವಂತ ಜೀವನಕ್ಕೆ,ಶುದ್ದ ಕುಡಿಯುವ ನೀರು ಮುಖ್ಯ ಎಂದು ಹೇಳಿದರು.
Kshetra Samachara
07/08/2022 05:54 pm