ಬೆಂಗಳೂರು: ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡಲು ಕೆಎಂಎಫ್ನಲ್ಲೂ ತೀರ್ಮಾನ ಆಗಿದೆ. ತಕ್ಷಣ ತೀರ್ಮಾನ ತೆಗೆದುಕೊಳ್ಳಲು ಸಿಎಂ ಗಮನಕ್ಕೆ ತಂದಿದ್ದೇನೆ ಎಂದು ವಿಧಾನಪರಿಷತ್ನಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ನೀಡಿದರು. ಕರ್ನಾಟಕದಲ್ಲಿ 16 ಮಿಲ್ಕ್ ಯೂನಿಯನ್ ಇದೆ. ಹಾಲು ಉತ್ಪಾದಕರ ಜತೆ ಗ್ರಾಹಕರನ್ನೂ ನೋಡಬೇಕಾಗುತ್ತದೆ. ಹಾಲು ಪ್ಯಾಕೇಟ್ ದರ 3 ರೂ. ಹೆಚ್ಚಳ ಮಾಡಿ ನೇರವಾಗಿ ರೈತರಿಗೆ ಕೊಡಲು ಒಕ್ಕೂಟಗಳೇ ನಿರ್ಧರಿಸಿವೆ. ಗ್ರಾಹಕರಿಗೂ ಹೆಚ್ಚು ಹೊರೆ ಆಗುವ ಹಾಗೆ ಮಾಡಲಾಗುವುದಿಲ್ಲ. ಹೀಗಾಗಿ ಸಿಎಂ ಸರಿಯಾದ ನಿರ್ಧಾರಕ್ಕೆ ಬರ್ತಾರೆ ಎಂದು ಹೇಳಿದರು.
ಹಾಲಿನ ದರ ಹೆಚ್ಚಳಕ್ಕೆ ಸಹಾಯಧನ ನೀಡುವಂತೆ ಕಾಂಗ್ರೆಸ್ ಸದಸ್ಯ ಎಸ್.ರವಿ ಮನವಿ
ರಾಜ್ಯದಲ್ಲಿ ಮಳೆಯಿಂದ ಹಾಲು ಉತ್ಪಾದನೆ ಇಳಿಕೆಯಾಗಿದೆ. ಹಾಲಿನ ದರ ಹೆಚ್ಚಳಕ್ಕೆ ಸಹಾಯಧನ ನೀಡುವಂತೆ ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಎಸ್.ರವಿ ಮನವಿ ಮಾಡಿದರು. ಕೊರೊನಾ ವೇಳೆ ಹಾಲು ಒಕ್ಕೂಟಗಳು ಸ್ಥಗಿತವಾಗಿರಲಿಲ್ಲ. ಬೆಂಗಳೂರು ಗ್ರಾ. ಜಿಲ್ಲೆಯಲ್ಲಿ 15 ಲಕ್ಷ ಲೀ. ಹಾಲು ಉತ್ಪಾದನೆ ಮಾಡಲಾಗುತ್ತಿತ್ತು. ಮಾರಾಟವಾಗದಿದ್ದಾಗ ಒಕ್ಕೂಟಗಳೇ ರೈತರ ನೆರವಿಗೆ ಬಂದಿದ್ದವು. ಈ ಬಾರಿ ಮಳೆ ತೀವ್ರತೆಯಿಂದ ಹಸುಗಳಿಗೆ ಮೇವು ಸಿಗುತ್ತಿಲ್ಲ. ಹೀಗಾಗಿ ಹಾಲು ಉತ್ಪಾದನೆ ಕೂಡ ಕಡಿಮೆಯಾಗಿದೆ. ಆದ್ದರಿಂದ ಕೂಡಲೇ ಹಾಲಿನ ದರ ಹೆಚ್ಚಳ ಮಾಡಿ ಎಂದು ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಎಸ್.ರವಿ ಒತ್ತಾಯಿಸಿದರು.
Kshetra Samachara
14/09/2022 03:45 pm