ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೊಸ ಬಸ್ ಖರೀದಿ ಬದಲಿಗೆ ಬಿಎಂಟಿಸಿಯಿಂದ ಹಳೆ ಬಸ್‌ಗೆ ಶೃಂಗಾರ

ಬಿಎಂಟಿಸಿ ನೆಟ್ಟಗಿರುವ ಬಸ್‌ಗಳೇ ಎಲ್ಲೆಂದರಲ್ಲಿ ನಿಲ್ಲುತ್ತವೆ. ಸಾಲದ್ದಕ್ಕೆ ಧಗಧಗಿಸಿ ಹೊತ್ತಿ ಉರಿಯುತ್ತವೆ. ಇಂತಹದ್ದರಲ್ಲಿ ಸ್ಕ್ರಾಪ್ ಆಗಿರೋ ಬಸ್‌ಗಳಿಗೆ ಹೊಸ ಲುಕ್ ಕೊಡ್ತೀನಿ ಅಂತ ಬಿಎಂಟಿಸಿ ಹೊರಟಿದೆ. ಬಿಎಂಟಿಸಿಯಲ್ಲೀಗ ಮುದುಕಿಗೆ ಶೃಂಗಾರ ಮಾಡೋ ಕೆಲಸ ಆರಂಭವಾಗಿದೆ.

ಬಿಎಂಟಿಸಿ ಆಗಾಗ ವಿವಾದಗಳನ್ನ ಮೈಮೇಲೆ ಎಳೆದುಕೊಳ್ತಾನೇ ಇರುತ್ತೆ. ಈಗಲೂ ಅದನ್ನೇ ಮಾಡಿ ಸುದ್ದಿಯಾಗಿದೆ. ಹೌದು‌. ಕಳಪೆ ಗುಣಮಟ್ಟದಿಂದ ಮೂಲೆ ಸೇರಿರುವ ಗುಜರಿ ಬಸ್‌ಗಳಿಗೆ ಹೊಸ ಲೂಕ್ ನೀಡಲು ಬಿಎಂಟಿಸಿ ತೀರ್ಮಾನಿಸಿದೆ. 9 ಲಕ್ಷ ಕಿಲೋ ಮೀಟರ್‌ಗಿಂತ ಹೆಚ್ಚು ಓಡಿರುವ ಬಸ್‌ಗಳು ಪ್ರಯಾಣಿಕರಿಗೆ ಸುರಕ್ಷತೆ ಅಲ್ಲ ಅನ್ನೋ ಕಾರಣಕ್ಕೆ ಸ್ಕ್ರಾಪ್ ಮಾಡಲಾಗುತ್ತದೆ. ಆದರೆ ಗುಜರಿಗೆ ಸೇರಿರುವ ನೂರಾರು ಬಸ್‌ಗಳಿಗೆ ಹೊಸ ಲೂಕ್ ನೀಡಿ ಮತ್ತೆ ರಸ್ತೆಗಿಳಿಸೋಕೆ ನಿಗಮ ತೀರ್ಮಾನಿಸಿದೆ. ಇಂಜಿನ್ ಫೈಲೂರ್, ಜಾಸ್ತಿ ಹೊಗೆ, ಪ್ರಯಾಣಿರಿಗೆ ಸೇಫ್ಟಿ ಇಲ್ಲದ ಕಾರಣ ಬಿಎಂಟಿಸಿಯಲ್ಲಿ ನೂರಾರು ಬಸ್‌ಗಳು ರಸ್ತೆ ಬಿಟ್ಟು ಗುಜರಿ ಸೇರಿವೆ. ಇಂತಹ ಬಸ್‌ಗಳಿಗೆ ಹೊಸ ಟಚ್ ನೀಡುವುದಕ್ಕೆ ಯತ್ನ ನಡೆದಿದೆ. ಈ ಬಸ್‌ಗಳಿಗೆ ಹೊಸ ಎಂಜಿನ್ ಆಳವಡಿಸಿ ಓಡಿಸಿದರೆ ನಷ್ಟದಿಂದ ಪಾರಾಗಬಹುದು ಅನ್ನೋ ಲೆಕ್ಕಚಾರಕ್ಕೆ ಬರಲಾಗಿದೆ.

ಬಿಎಂಟಿಸಿ ಡಿಪೋಗಳಲ್ಲಿ ಹಾಳಾದ ಸ್ಥಿತಿಯಲ್ಲಿರುವ ಸಾಕಷ್ಟು ಗುಜರಿ ಬಸ್‌ಗಳಿಗೆ ಹಳೆಯ ಎಂಜಿನ್‌ಗೆ ಹೊಸ ಎಂಜಿನ್ ಮಾರ್ಪಡಿಸಲು ತೀರ್ಮಾನಿಸಲಾಗಿದೆ. 9 ಲಕ್ಷ ಕಿ.ಮಿ. ಸಂಚರಿಸಿದರೂ ಮತ್ತೆ ಅದೇ ಬಸ್‌ಗಳಿಗೆ ಹೊಸ ಎಂಜಿನ್ ಆಳವಡಿಸಿರೋದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ಗುಜರಿಯವರು ಹಳೆಯ ಬಸ್‌ಗಳನ್ನ ಖರೀದಿಗೆ ನಿರಾಕರಿಸಿದ ಕಾರಣ ಹೊಸ ಎಂಜಿನ್ ಆಳವಿಡಿದರೆ ಓಡುತ್ತಾ ಅನ್ನೋದು ಬಿಎಂಟಿಸಿ ವಾದ. ಹೀಗಾಗಿ ಇನ್ಮುಂದೆ ಸ್ಕ್ರಾಪ್ ಮಾಡುವ ಬದುಲು ಅದೇ ಬಸ್‌ಗೆ ಹೊಸ ಇಂಜಿನ್ ಹಾಕಿ ರಸ್ತೆಗಿಳಿಸೋ ತೀರ್ಮಾಕ್ಕೆ ನಿಗಮ ಬಂದಿದೆ.

ಬಿಎಂಟಿಸಿ ಬಳಿ ಹೊಸ ಬಸ್ ಖರೀದಿಗೆ ಹಣ ಇಲ್ಲ. ಹೀಗಾಗಿ ಕಳೆದ ಹತ್ತು ವರ್ಷಗಳ ಹಿಂದೆ ಖರೀದಿಸಿ ಗುಜರಿಗೆ ಹಾಕಿರೋ ಬಸ್‌ಗಳನ್ನ ಮತ್ತೆ ಓಡಿಸಬೇಕು ಅನ್ನೋ ಹಠಕ್ಕೆ ನಿಗಮ ಮುಂದಾಗಿದೆ. ಸ್ಕ್ರಾಪ್ ಆಗಿರೋ ಬಸ್‌ಗಳನ್ನ ಓಡಿಸಬಾರದು. ಅದು ಪ್ರಯಾಣಿಕರಿಗೆ ಸುರಕ್ಷತೆ ಅಲ್ಲ ಅನ್ನೋ ಕಾರಣಕ್ಕೆ ಆರ್‌ಟಿಓ ನಿಯಮದಂತೆ ಮಾಡಬೇಕು. ಆದರೆ ಇಂಥ ಹೊತ್ತಿನಲ್ಲಿ ಮುದುಕಿಗೆ ಶೃಂಗಾರ ಮಾಡಿದ ಹಾಗೆ, ಕೆಟ್ಟು ಮೂಲೆಯಲ್ಲಿ ನಿಂತ ಬಸ್ ಗಳಿಗೆ ಹೊಸ ಎಂಜಿನ್ ಹಾಕಿ ಬಸ್ ಓಡಿಸೋದು ಎಷ್ಟು ಮಟ್ಟಿಗೆ ಸರಿ. ಇದ್ರಿಂದ ನಿಗಮಕ್ಕೆ ಲಾಭ ಬರೋದಿರಲಿ ಇನ್ನಷ್ಟು ನಷ್ಟ ಗ್ಯಾರೆಂಟಿ ಅನ್ನೋ ಅಪಸ್ವರವೂ ಕೇಳಿಬಂದಿದೆ.

ಬಿಎಂಟಿಸಿ ಬಳಿ 6400 ಬಸ್‌ಗಳು ಇವೆ. ಇವುಗಳನ್ನು ಸರಿಯಾಗಿ ನಿರ್ವವಣೆ ಮಾಡುತ್ತಿಲ್ಲ. ಹೀಗಾಗಿ ಹೊಸ ಬಸ್‌ಗಳೇ ಮೂಲೆ ಸೇರುತ್ತಿವೆ. ಇದರ ಮಧ್ಯೆ ಮೂಲೆ ಸೇರಿರುವ ಬಸ್‌ಗಳಿಗೆ ಹೊಸ ಟಚ್ ನೀಡುತ್ತೀವಿ ಅಂತ ಹೊರಟ್ಟಿದ್ದಾರೆ. ಬಿಎಂಟಿಸಿ ನಿರ್ಧಾರದಂತೆ ಗುಜರಿ ಬಸ್ ಗಳು ರಸ್ತೆಗಿಳಿದರೆ ಅನಾಹುತ ಗ್ಯಾರೆಂಟಿ. ಜೊತೆಗೆ ಗುಜರಿ . ಬಸ್ಗಳ ಮೇಲೆ ಮತ್ತೆ ಹೊಸ ಪ್ರಯೋಗ ಬೇಕಾ ಅನ್ನೋದು ಈಗ ಪ್ರಶ್ನೆಯಾಗಿದೆ.

ಗಣೇಶ್ ಹೆಗಡೆ ಪಬ್ಲಿಕ್ ನೆಕ್ಷ್ಟ್ ಬೆಂಗಳೂರು

Edited By :
PublicNext

PublicNext

30/05/2022 08:29 pm

Cinque Terre

29.91 K

Cinque Terre

0

ಸಂಬಂಧಿತ ಸುದ್ದಿ