ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾವಿರಾರು ದೂರು ಬಂದ್ರು ತಲೆ ಕೆಡಿಸಿಕೊಳ್ಳದ BMTF!; ಸಾರ್ವಜನಿಕರ ಅಸಮಾಧಾನ

BMTF ಅಂತ ಒಂದು ಪೊಲೀಸ್ ವಿಂಗ್ ಇದೆ.‌ ಅದೆಲ್ಲಿದೆ ? ಅದೇನು ಮಾಡುತ್ತೆ? ಅನ್ನೋದೆಲ್ಲಾ ಬೆಂಗಳೂರಿನ ಬಹುತೇಕ ಮಂದಿಗೆ ಗೊತ್ತಿಲ್ಲ.‌ ಅಷ್ಟರ ಮಟ್ಟಿಗಿದೆ ಆ BMTF ಕಾರ್ಯವೈಖರಿ. ಸುಮ್ಮನೆ ಕಾಲಹರಣ ಮಾಡುವ BMTF ಇದೀಗ ಮತ್ತೆ ತನ್ನ ಅಧಿಕಾರ ವ್ಯಾಪ್ತಿ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.

BMTF (ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್) ಸರ್ಕಾರದ ಈ ಇಲಾಖೆ ಸರ್ಕಾರಿ ಸ್ವತ್ತು, ಬಿಬಿಎಂಪಿ ಆಸ್ತಿಗಳನ್ನು ಭೂಗಳ್ಳರಿಂದ, ಮಾಫಿಯಾಗಳಿಂದ ರಕ್ಷಣೆ ಮಾಡಿ ಸರ್ಕಾರ ಹಾಗೂ ಬಿಬಿಎಂಪಿ ಅಧೀನದಲ್ಲೇ ಇರುವಂತೆ ನೋಡಿಕೊಳ್ಳಬೇಕು. ಇಲ್ಲಿ ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಿ, ADGP, SP, DYSP ಹೀಗೆ ನೇಮಕಾತಿಯೂ ನಡೆದಿರುತ್ತದೆ. ಆದರೆ, ಲಕ್ಷ ಖರ್ಚು ಮಾಡಿ ಇಲಾಖೆ ನಡೆಸಿದ್ರೂ ಈ ಕಾರ್ಯಪಡೆಯಿಂದ ಯಾವುದೇ ಪ್ರಯೋಜನ ಆಗ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. RTI ನಲ್ಲಿ ಪಡೆದ ದಾಖಲೆಗಳು ಇದಕ್ಕೆ ಪುಷ್ಠಿ ನೀಡುವಂತಿದೆ.

ಕಳೆದ ಐದು ವರ್ಷದಲ್ಲಿ ಸಾವಿರಾರು ದೂರು ಬಂದರೂ BMTF ಅಧಿಕಾರಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕಾಲಹರಣ ಮಾಡುತ್ತಿರುವ ಆರೋಪವಿದೆ. ಸಾವಿರಾರು ದೂರುಗಳು ಬಂದ್ರೂ ಶಿಕ್ಷೆ ಪ್ರಮಾಣ ಶೂನ್ಯವಾಗಿದೆ. ಬೆಂಗಳೂರಿನಲ್ಲಿರುವ ಎಲ್ಲಾ ಸರ್ಕಾರಿ ಆಸ್ತಿ ಕಾಪಾಡಬೇಕಾದ ಇಲಾಖೆ ಇದಾಗಿದ್ದು, ಆಸ್ತಿ ರಕ್ಷಣೆ ಮಾಡುವ ಬದಲು ಭ್ರಷ್ಟರ ರಕ್ಷಣೆ ಮಾಡ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ.‌ ಈ ಅನುಮಾನ ಯಾಕಂದ್ರೆ ಕಳೆದ ಹಲವು ವರ್ಷಗಳಿಂದ ಯಾವೊಂದು ಪ್ರಕರಣದಲ್ಲೂ ಕಾರ್ಯಪ್ರವೃತ್ತವಾಗಿಲ್ಲ BMTF ಪಡೆ. ಯಾಕಂದ್ರೆ RTI ನಲ್ಲಿ ಪಡೆದ ದಾಖಲೆಯಲ್ಲಿ BMTF ಕಾರ್ಯವೈಖರಿ ಬಟಾಬಯಲಾಗಿದೆ.

ಕಳೆದ ಐದು ವರ್ಷದಲ್ಲಿ BMTF ಮಾಡಿದ್ದೇನು.!?

ವರ್ಷ ದೂರುಗಳು B ರಿಪೋರ್ಟ್

2018-19 280 06

2019-20 474 05

2020-21 366 01

2021-22 392 02

2022-23 177

ಒಟ್ಟು 1689 13

ಸರ್ಕಾರಿ ಸ್ವತ್ತು ರಕ್ಷಣೆ ಮಾಡುವುದು, ಸರ್ಕಾರಿ ಆಸ್ತಿ ರಕ್ಷಿಸುವುದು, ಒತ್ತುವರಿ ಆಗಿರೋ ಸ್ವತ್ತನ್ನು ತೆರವು ಮಾಡುವುದು, ಬಫರ್ ಝೋನ್ ನಲ್ಲಿ ಒತ್ತುವರಿ ಇದ್ರೆ ತೆರವು ಮಾಡಬೇಕು.

ವೆಬ್ ಸೈಟ್ ನಲ್ಲಿ ಯಾವುದೇ ಮಾಹಿತಿ ಹಾಕುತ್ತಿಲ್ಲ, ಪಾರದರ್ಶಕ ಆಡಳಿತ ನಡೆಸ್ತಿಲ್ಲ, ಭೂಗಳ್ಳರನ್ನು ರಕ್ಷಣೆ ಮಾಡುವ ಕೆಲ್ಸ ಆಗ್ತಿದೆ, ರಸ್ತೆ ಒತ್ತುವರಿ ಆಗಿದೆ ಅಂತ ದೂರು ಕೊಟ್ರೂ ಕ್ರಮ ಆಗಿಲ್ಲ, ದೂರುದಾರರಿಗೆ ಸೂಕ್ತ ಮಾಹಿತಿ ನೀಡ್ತಿಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ರಕ್ಷಣೆ.

ಮತ್ತೊಂದು ಜವಾಬ್ದಾರಿ ನೀಡಿ ಅಂತ ಸರ್ಕಾರಕ್ಕೆ ಪತ್ರ!: ಸರ್ಕಾರಿ ಸ್ವತ್ತು ರಕ್ಷಣೆ ಮಾಡದೇ ಕಾಲಹರಣ ಮಾಡ್ತಿದೆ ಅನ್ನೋ ಆರೋಪ ತಮ್ಮ ಮೇಲೆ ಇದ್ದರೂ ಮತ್ತಷ್ಟು ಅಧಿಕಾರ ವ್ಯಾಪ್ತಿ ಕೊಡಿ ಅಂತ ನಗರಾಭಿವೃದ್ಧಿ ಇಲಾಖೆಗೆ BMTF ADGP ಪತ್ರ ಬರೆದಿದ್ದಾರೆ. ಈಗಿರೋ ಕಾರ್ಯದ ಜತೆ ಅಕ್ರಮ ಕಟ್ಟಡಗಳ ತೆರವು ಜವಾಬ್ದಾರಿ ನೀಡುವಂತೆ ಪತ್ರ ಬರೆಯಲಾಗಿದೆ. ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿ ಕೊಡ್ತಿದೆ.

Edited By :
PublicNext

PublicNext

01/07/2022 07:46 pm

Cinque Terre

41.86 K

Cinque Terre

0

ಸಂಬಂಧಿತ ಸುದ್ದಿ