ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆದಿನಾರಾಯಣ ಹೊಸಹಳ್ಳಿ ಗ್ರಾಮದ ಸರ್ಕಾರಿ ಜಾಗ ಸ್ವಾಧೀನಕ್ಕೆ ಆಗ್ರಹಿಸಿ ಪ್ರತಿಭಟನೆ

ತಾಲೂಕಿನ‌ ಕಸಬಾ ಹೋಬಳಿಯ ಆದಿನಾರಾಯಣ ಹೊಸಹಳ್ಳಿ ಗ್ರಾಮದ‌ ಸರ್ವೇ ನಂ.8/2ರಲ್ಲಿರುವ 10 ಗುಂಟೆ ಸರ್ಕಾರಿ‌ ಜಮೀನನ್ನು ಕೆಲ ಪಟ್ಟಭದ್ರರು ಕಸಿಯುವ ಹುನ್ನಾರ ನಡೆಸಿದ್ದು, ಕೂಡಲೇ ತಾಲೂಕು ಆಡಳಿತ ಆ ಜಾಗವನ್ನು ವಶಕ್ಕೆ ಪಡೆಯಬೇಕು ಎಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಒತ್ತಾಯಿಸಿದರು.

ತಾಲೂಕು ಕಚೇರಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ‌ ಬಂದ ಕಾರ್ಯಕರ್ತರು, ಸರ್ಕಾರಿ ಜಮೀನು‌ ರಕ್ಷಣೆಗೆ ಆಗ್ರಹಿಸಿ ಘೋಷಣೆ ಕೂಗಿದರು.

ಗ್ರಾಮದ ದೇವಸ್ಥಾನ ಪಕ್ಕದಲ್ಲಿರುವ 10 ಗುಂಟೆ ಸರ್ಕಾರಿ ಭೂಮಿಯನ್ನು ಗ್ರಾಮದ ಪಿಳ್ಳೇಗೌಡ ಅವರ ಪುತ್ರ ಮಂಜುನಾಥ ಅವರು ಸ್ವಂತಕ್ಕೆ ಬಳಸಿಕೊಳ್ಳಲು ಹುನ್ನಾರ ನಡೆಸಿದ್ದರು. 2011ರಲ್ಲಿ ಅವರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. ಆದರೂ ಒತ್ತುವರಿ ಪ್ರಯತ್ನ ಮುಂದುವರಿಸಿದ್ದಾರೆ. 2021ರ ಸೆ.26ರಂದು ಈ ಸಂಬಂಧ ತಕರಾರು ಅರ್ಜಿಯನ್ನೂ ಸಲ್ಲಿಸಲಾಗಿದೆ. ಈಗ ಚಂದ್ರಶೇಖರ್ ಅವರ ಪುತ್ರ ಲಕ್ಷ್ಮಯ್ಯ ಎಂಬುವರು ಕೂಡ ಹುಲ್ಲಿನ ಬಣವೆ ಹಾಕಿ ಸರ್ಕಾರಿ ಜಾಗ ಅತಿಕ್ರಮಿಸಲು ಮುಂದಾಗಿದ್ದಾರೆ. ಹಾಗಾಗಿ ತಹಶೀಲ್ದಾರ್ ಅವರು ಈ ಕೂಡಲೇ ಜಮೀನು ಸರ್ವೇ ಮಾಡಿಸಿ, ಸರ್ಕಾರಿ ಜಾಗ ಎಂದು ನಾಮಫಲಕ ಹಾಕಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಸರ್ಕಾರಿ ಭೂಮಿಯ ಸರ್ವೇ ನಡೆಸುವಂತೆ ತಹಶೀಲ್ದಾರ್ ಅವರಿಗೆ‌ ಮನವಿ ಮಾಡಿದರೂ ಸ್ಪಂದಿಸಿಲ್ಲ. ಶಾಸಕರೇ ಖುದ್ದು ತಿಳಿಸಿದರೂ ಸರ್ಕಾರಿ ಜಾಗ ಸ್ವಾಧೀನಕ್ಕೆ ಮುಂದಾಗಿಲ್ಲ ಎಂದು ದೂರಿದರು.

ಬಳಿಕ ತಹಶೀಲ್ದಾರ್ ಅವರಿಗೆ ವೇದಿಕೆ ಕಾರ್ಯಕರ್ತರು‌ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಮೋಹನಕುಮಾರಿ ಅವರು, ಗ್ರಾಮದ ಸರ್ಕಾರಿ ಭೂಮಿ ಸರ್ವೇ‌ ನಡೆಸಲು ಬಂದಿದ್ದ‌ ಸಿಬ್ಬಂದಿಯನ್ನು ಗ್ರಾಮಸ್ಥರೇ ಗಲಾಟೆ‌ ಮಾಡಿ ವಾಪಸ್ ಕಳುಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಸರ್ವೇಯರ್ ಬದಲಾಗಿದ್ದರಿಂದ ವಿಳಂಬವಾಯಿತು. ಯಾವುದೇ ಕಾರಣಕ್ಕೂ ಸರ್ಕಾರಿ ಭೂಮಿ ಕಬಳಿಸಲು ಬಿಡುವುದಿಲ್ಲ. ಮುಂದಿನ ವಾರದಲ್ಲಿ ಸರ್ವೇ ಕಾರ್ಯ ಪೂರ್ಣಗೊಳಿಸಿ, ಜಾಗ ಸ್ವಾಧೀನಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು‌ ಭರವಸೆ ನೀಡಿದರು.

Edited By :
PublicNext

PublicNext

11/06/2022 02:11 pm

Cinque Terre

31.4 K

Cinque Terre

0

ಸಂಬಂಧಿತ ಸುದ್ದಿ