ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್ : ಕೆಐಎಡಿಬಿ ಅಧಿಕಾರಿಗಳ ವಿರುದ್ದ ರೈತರು ಪ್ರತಿಭಟನೆ

ಭೂಸ್ವಾಧೀನವನ್ನು ಕೈಬಿಡುವಂತೆ ಒತ್ತಾಯಿಸಿ ವಿಷದ ಬಾಟಲ್ ಗಳನ್ನು ಹಿಡಿದು ಪ್ರತಿಭಟನೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ನಡೆದಿದೆ.

ರೈತರ ಜಮೀನುಗಳನ್ನು ಭೂ ಕಬಳಿಕೆ ಮಾಡಿಕೊಂಡಿವುದಾಗಿ ಆರೋಪಿಸಿ ರೈತರು ಕೆಐಎಡಿಬಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಇಗ್ಗಲೂರು ಗ್ರಾಮದಲ್ಲಿ ಯುತೋ ಎಂಬ ಖಾಸಗಿ ಸಂಸ್ಥೆಯ ಮುಖಾಂತರ ಕೆಐಎಬಿಡಿ ಇಲಾಖೆ ಸಹಯೋಗದಲ್ಲಿ ರೈತರ ಜಮೀನುಗಳನ್ನು 1996 ರಲ್ಲಿ ಸರ್ವೇ ನಂ 84/3 ಸುಮಾರು 15 ಎಕರೆ ಜಮೀನು ಇದ್ದು ಅದರಲ್ಲಿ 11 ಎಕರೆ ಜಮೀನನ್ನು ಅಗಲೇ ವಶಪಡಿಸಿಕೊಂಡಿದ್ದರು.

ಈಗ ಮೂರುವರೆ ಎಕರೆ ಜಾಗ ಭೂಕಬಳಿಕೆ ಮಾಡಲು ಬಂದಾಗ ರೈತರು ತಡೆ ಒಡ್ಡಿದ್ದಾರೆ. ಆ ಸಂದರ್ಭದಲ್ಲಿ ನೊಂದ ರೈತರು ಕೆಐಎಬಿಡಿ ವಿರುದ್ದ ಪ್ರತಿಭಟನೆ ನಡೆದಿದ್ದಾರೆ .

ಕೆಐಎಬಿಡಿ ಅಧಿಕಾರಿ ವಿಜಯಕುಮಾರ್ ತಂಡ ಇಂದು ಜೆಸಿಬಿ ಮುಖಾಂತರ ತೆರವು ಮಾಡಲು ಪೊಲೀಸ್ ಬಿಗಿ ಭದ್ರತೆಯಲ್ಲಿ ಬಂದಾಗ ರೈತರು ತಡೆಹಿಡಿದು ಪ್ರತಿಭಟನೆ ನಡೆಸಿದ್ದಾರೆ. ನಮಗೆ ನಮ್ಮ ಜಮೀನುಗಳನ್ನ ಬಿಡುವಂತೆ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ) ನಮಗೆ ನ್ಯಾಯ ಕೊಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.

Edited By :
Kshetra Samachara

Kshetra Samachara

09/06/2022 04:15 pm

Cinque Terre

3.05 K

Cinque Terre

0

ಸಂಬಂಧಿತ ಸುದ್ದಿ