ದೇಶದ ನಂಬರ್ - ೧ ಸಂಸ್ಥೆ ಎಂದು ಕರೆಸಿಕೊಳ್ತಿದ್ದ ನಮ್ಮ ಬಿಎಂಟಿಸಿ ಬಸ್ ಗಳನ್ನು ಇದೀಗ ನಡು ರಸ್ತೆಯಲ್ಲಿ ತಳ್ಳುವ ಪರಿಸ್ಥಿತಿ ಬಂದಿದೆ.
ನಗರದ ಕಾರ್ಪೋರೇಶನ್ ವೃತ್ತದ ಬಳಿ ಮೆಜೆಸ್ಟಿಕ್ ನಿಂದ ಕುವೆಂಪು ನಗರಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್ ಇಂದು ಕೆಟ್ಟು ನಿಂತಿದೆ. ಪರಿಣಾಮ ಜನರು ಕೆಲವು ದೂರ ಬಸ್ ತಳ್ಳಬೇಕಾಯ್ತು. ಈ ಸಂದರ್ಭದಲ್ಲಿ ಪ್ರಯಾಣಿಕರು ಬಿಎಂಟಿಸಿ ಅಧಿಕಾರಿಗಳಿಗೆ ಬೈದು ಕೊಂಡ್ರು. ಹಾಗೇ ಮಹಾನಗರ ಸಾರಿಗೆ ಸಂಸ್ಥೆಯ ಮೇಲೆ ಜನರಲ್ಲಿ ನಂಬಿಕೆ ಕಳೆದು ಕೊಳ್ತಾ ಬಂದಿರೋದು ನಿಜ.
PublicNext
01/08/2022 07:21 pm