75 ನೇ ಅಮೃತ ಸ್ವತಂತ್ರಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ.ಈ ಹಿನ್ನೆಲೆ ಕಾರ್ಯಕ್ರಮದ ಭದ್ರತೆಯ ರೂಪರೇಷ ಕುರಿತಂತೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಸಭೆ ನಡೆಸಿದ್ರು.ಸಭೆಯಲ್ಲಿ ಬೆಂಗಳೂರು ನಗರ ಡಿಸಿ, ಬಿಬಿಎಂಪಿ ಆಯುಕ್ತರು. ಹೆಚ್ಚುವರಿ ಪೊಲೀಸ್ ಆಯುಕ್ತರುಗಳು, ಡಿಸಿಪಿಗಳು, ಅಗ್ನಿಶಾಮಕದಳ ಅಧಿಕಾರಿಗಳು, ಮೂರು ಸೇನೆಯ ಬೆಂಗಳೂರು ಮುಖ್ಯಸ್ಥರುಗಳು ಸಭೆಯಲ್ಲಿ ಭಾಗಿಯಾಗಿದ್ರು.
ಅಮೃತ ಸ್ವಾತಂತ್ರ್ಯೋತ್ಸವದಲ್ಲಿ ಬಂದೋಬಸ್ತ್, ಕಾರ್ಯಕ್ರಮದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ರು. ಇನ್ನೂ ಕೋವಿಡ್ ನಿಂದ ಕಳೆದ ಎರಡು ವರ್ಷದಿಂದ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ವಿಜೃಂಬಣೆಯಿಂದ ನಡೆದಿರಿಲಿಲ್ಲ.ಈ ಹಿನ್ನೆಲೆ ಈ ಬಾರಿ 75ನೇ ಅಮೃತ ಸ್ವತಂತ್ರೋತ್ಸವ ಅದ್ಧೂರಿಯಾಗಿ ನೆರೆವೇರಿಸಲು ಸರ್ಕಾರ ಸಜ್ಜಾಗಿದೆ. ಆದ್ದರಿಂದ ಭದ್ರತೆ ಮತ್ತು ಬಂದೋಬಸ್ತ್ ಕುರಿತಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಚರ್ಚೆ ನಡೆಸಿದ್ರು.
PublicNext
25/07/2022 01:02 pm