ಮೆಟ್ರೋ ಹಳಿಗೆ ಇಳಿದ ಮೇಲೆ ಬಿಎಂಟಿಸಿಗೆ ಪ್ರಯಾಣಿಕರ ಅಭಾವ ಎದುರಾಗಿದೆ. ಹೀಗಾಗಿ ಆದಾಯದ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಈ ಸಮಸ್ಯೆಗೆ ಹೊಸ ಆದಾಯದ ಮೂಲ ಹುಡುಕಲು ಹೊರಟ ಬಿಎಂಟಿಸಿ ಮೆಟ್ರೋಗೆ ಫೀಡರ್ ಬಸ್ ಸೇವೆ ಆರಂಭಿಸಿತು. ಆದರೆ ಈ ಫೀಡರ್ ಈಗ ಬಿಎಂಟಿಸಿಗೆ ನಷ್ಟವನ್ನುಂಟು ಮಾಡುತ್ತಿದೆ.
ಇನ್ನೂ ಮೆಟ್ರೋ ಲಾಸ್ಟ್ ಮೈಲ್ ಕನೆಕ್ಟಿವಿಟಿಗಾಗಿ ಬಿಎಂಟಿಸಿ ಫೀಡರ್ ಬಸ್ ಸೇವೆ ಒದಗಿಸುತ್ತಿದೆ. ಇದಕ್ಕಾಗಿ 500 ಮಿಡಿ ಬಸ್ಗಳನ್ನು ಕೊಂಡಿದ್ದ ಬಿಎಂಟಿಸಿ ಅವೆಲ್ಲಾ ಕೈಕೊಡ್ತಿರೋ ಕಾರಣ ಇತರೆ ಬಸ್ ಗಳನ್ನೂ ಮೆಟ್ರೋಗೆ ಫೀಡರ್ ಬಸ್ ಸೇವೆ ನೀಡೋಕೆ ನಿಯೋಜಿಸುತ್ತಿದೆ.
ಆದರೆ ಈ ಫೀಡರ್ ಸರ್ವಿಸ್ ನಿಂದ ಬಿಎಂಟಿಸಿಗೆ ನಿಗದಿತ ಆದಾಯ ಬರುತ್ತಿಲ್ಲ. ಲಾಸ್ ಮೇಲೆ ಲಾಸ್ ಆಗ್ತಿದೆ ಎನ್ನುವುದು ಬಿಎಂಟಿಸಿ ಆರೋಪ.
ನಮಗೆ ಆರ್ಥಿಕ ಶಕ್ತಿ ನೀಡಿದ್ರೆ ಮಾತ್ರ ಫೀಡರ್ ಸೇವೆ ನೀಡೋಕೆ ಸಾಧ್ಯ ಎನ್ನುವುದು ಬಿಎಂಟಿಸಿ ವಾದ.
ಕೋವಿಡ್ ಬಳಿಕ ಬಿಎಂಟಿಸಿ ನಷ್ಟದ ಹಾದಿ ಹಿಡಿದಿದೆ. ಈಗಾಗಲೇ ನೌಕರರಿಗೆ ಸಂಬಳ ಕೊಡಲಾರದ ಸ್ಥಿತಿಗೆ ಬಂದು ತಲುಪಿರೋ ಬಿಎಂಟಿಸಿಗೆ ಈ ಫೀಡರ್ ಸೇವೆ ಗಾಯದ ಮೇಲೆ ಬರೆ ಎಳೆದಂತಾಗ್ತಿದೆ.
ಈ ಬಗ್ಗೆ ಡಲ್ಟ್ ಗಮನಕ್ಕೆ ತಂದಿರೋ ಬಿಎಂಟಿಸಿ ಆರ್ಥಿಕ ನಷ್ಟ ಬರಿಸಿದ್ರೆ ಮಾತ್ರ ಫೀಡರ್ ಸರ್ವಿಸ್ ಕೊಡಲು ಸಾಧ್ಯ ಎನ್ನುತ್ತಿದೆ.
Kshetra Samachara
09/06/2022 02:45 pm