ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೈಕ್‌ ಆಂಬ್ಯುಲೆನ್ಸ್‌ಗಳಿಗೂ ಅನಾರೋಗ್ಯ; ಜನಸೇವೆಗಾಗಿ ರಸ್ತೆಗೆ ಇಳಿದಷ್ಟೇ ವೇಗದಲ್ಲಿ ಮರೆ

ಬೆಂಗಳೂರು: ಬೈಕ್‌ ಆಂಬ್ಯುಲೆನ್ಸ್‌ಗಳಿಗೆ ಸಾರ್ವಜನಿಕರಿಂದ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಎಲ್ಲರೂ 108 ಆಂಬ್ಯುಲೆನ್ಸ್‌ಗಳಿಗೆ ಹೆಚ್ಚು ಮೊರೆ ಹೋಗಿದ್ದರು. ಅಲ್ಲದೆ, ಬೈಕ್‌ಗಳಲ್ಲಿ ರೋಗಿಗಳನ್ನು ಕರೆದುಕೊಂಡು ಹೋಗುವುದು ಕಷ್ಟ ಸಾಧ್ಯವಾಗುತ್ತಿತ್ತು. ರಾಜ್ಯದಲ್ಲಿ ಆರಂಭವಾಗಿರುವ 30 ಬೈಕ್‌ ಆಂಬ್ಯುಲೆನ್ಸ್‌ಗಳ ಪೈಕಿ ಪ್ರಸ್ತುತ 7-8 ಬೈಕ್‌ ಆಂಬ್ಯುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ, ಇವನ್ನು ಕೈಬಿಡಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಾಹನ ದಟ್ಟಣೆಯಿರುವ ನಗರ ಪ್ರದೇಶಗಳಲ್ಲಿ ತುರ್ತು ಸೇವೆ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಬೈಕ್‌ ಆಂಬ್ಯುಲೆನ್ಸ್‌ ಸೇವೆ ಬಹುತೇಕ ಸ್ಥಗಿತವಾಗಿದೆ. ನಿತ್ಯ ಹತ್ತಾರು ರಸ್ತೆ ಅಪಘಾತಗಳು ಸಂಭವಿಸುತ್ತವೆ. ಸಕಾಲದಲ್ಲಿ ಬೈಕ್‌ ಆಂಬ್ಯುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕರೆ ತರುವುದಕ್ಕೆ ಸಹಾಯವಾಗುತ್ತಿತ್ತು. ಇದೀಗ ಅವು ಕಾರ್ಯಾಚರಣೆ ನಿಲ್ಲಿಸಿವೆ.

ರಾಜ್ಯಾದ್ಯಂತ 30 ಬೈಕ್‌ ಆಂಬ್ಯುಲೆನ್ಸ್‌ಗಳ ಸೇವೆ ಆರಂಭಿಸಲಾಗಿತ್ತು. ಈ ಪೈಕಿ ಬಹುತೇಕ ಬೈಕ್‌ಗಳು ಹಾಳಾಗಿದ್ದು, ಅವುಗಳ ನಿರ್ವಹಣೆ ಮಾಡುವುದೇ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿತ್ತು. ಈ ಎಲ್ಲ ಕಾರಣಗಳಿಂದಾಗಿ ಮುಂದಿನ ಹೊಸ ಸೇವೆಗಳಲ್ಲಿ ಬೈಕ್‌ ಆಂಬ್ಯುಲೆನ್ಸ್‌ಗಳ ಸೇವೆ ಕೈಬಿಡಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

03/10/2022 08:25 pm

Cinque Terre

1.34 K

Cinque Terre

0

ಸಂಬಂಧಿತ ಸುದ್ದಿ