ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿಯ ಬಿಳಿ ಆನೆಗಳೆಂದರೆ ಇವರೇನಾ..?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಮಾರ್ಷಲ್‌ಗಳು ಹೊರೆಯಾಗಿ ಮಾರ್ಪಟ್ಟಿದ್ದಾರೆ. ಇಂದಿರಾ ಕ್ಯಾಂಟೀನ್‌ ಭದ್ರತೆಗೆ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುವುದಕ್ಕೆ ಒಟ್ಟು 482 ಮಾರ್ಷಲ್‌, ವಾರ್ಡ್‌ಗೆ ಒಬ್ಬರಂತೆ 198 ಕ್ಲೀನ್‌ಅಪ್‌ ಮಾರ್ಷಲ್‌, ಬೆಳ್ಳಂದೂರು ಕೆರೆಗೆ ಮೂರು ಪಾಳಿಯಲ್ಲಿ ಕಾವಲಿಗೆ 21 ಮಾರ್ಷಲ್‌, ಕೊವೀಡ್ ನಿಯಮ ಉಲ್ಲಂಘನೆ ಪಾಲನೆ ಸೇರಿದಂತೆ ಒಟ್ಟು 973 ಮಾರ್ಷಲ್‌ಗಳು ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಾರ್ಡ್‌ ಮಟ್ಟದ ಕ್ಲೀನ್‌ ಅಪ್‌ ಮಾರ್ಷಲ್‌ ಮತ್ತು ಅಧಿಕಾರಿಗಳಿಗೆ ವೇತನ, ಸಮವಸ್ತ್ರ, ಮೊಬೈಲ್‌ ಬಿಲ್‌, ಇಂಧನ ಭತ್ಯೆಗೆ ಮಾಸಿಕವಾಗಿ 88.38 ಲಕ್ಷ ರೂ. ಸೇರಿದಂತೆ ಒಟ್ಟು 10.60 ಕೋಟಿ ರೂ.ಗಳನ್ನು ವಾರ್ಷಿಕವಾಗಿ ಪಾಲಿಕೆ ವೆಚ್ಚ ಮಾಡುತ್ತಿದೆ.

ಜತೆಗೆ ಇಂದಿರಾ ಕ್ಯಾಂಟೀನ್‌ ಬೆಳ್ಳಂದೂರು ಕೆರೆ ಭದ್ರತೆ ನೇಮಿಸಲಾದ ಮಾಷ್‌ರ್‍ಲ್‌ಗಳಿಗೆ ವೇತನ ನೀಡುತ್ತಿದೆ. ಅದರೊಂದಿಗೆ ಎನ್‌ಜಿಟಿ ಹೇಳಿದಂತೆ ಬಿಬಿಎಂಪಿಯ 169 ಕೆರೆಗಳಿಗೆ ಮೂರು ಪಾಳಿಗೆ ಸುಮಾರು 507 ಜನ ಮಾರ್ಷಲ್‌ಗಳು ಬೇಕಾಗಲಿದ್ದಾರೆ. ಅಷ್ಟೊಂದು ಸಿಬ್ಬಂದಿಗೆ ವೇತನ ನೀಡುವುದು ಪಾಲಿಕೆಗೆ ಹೊರೆಯಾಗಲಿದೆ.

ಮಾರ್ಷಲ್‌ ಹುದ್ದೆಗೆ ವೇತನವೇನು ಕಡಿಮೆ ಇಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ ವಾರ್ಡ್‌ ಮಟ್ಟದಲ್ಲಿ ನೇಮಿಸಲಾದ ಕ್ಲೀನ್‌ ಅಪ್‌ ಮಾರ್ಷಲ್‌ ಹುದ್ದೆಗೆ ಮಾಸಿಕವಾಗಿ 25 ಸಾವಿರ ರು. ವೇತನ, ದಿನಕ್ಕೆ ಎರಡು ಲೀಟಲ್‌ ಪೆಟ್ರೋಲ್‌, ತಿಂಗಳಿಗೆ 500ರೂ. ಮೊಬೈಲ್‌ ಬಿಲ್‌, ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ನೀಡಲಾಗುತ್ತದೆ. ಆದೇ ರೀತಿ ಕೆರೆ ಹಾಗೂ ಇಂದಿರಾ ಕ್ಯಾಂಟೀನ್‌ ಭದ್ರತೆ ನೇಮಿಸಿದ ಮಾರ್ಷಲ್‌ಗಳಿಗೂ ನೀಡಲಾಗುತ್ತದೆ. ಹೀಗಾಗಿ ಎಲ್ಲೂ ಕಾಣಿಸದ ಮಾರ್ಷಲ್‌ಗಳು ಪಾಲಿಕೆಗೆ ಬಿಳಿ ಆನೆ ಸಾಕಿದಂತೆ ಆಗಿದೆ.

ವಿಶೇಷ ವರದಿ- ಗಣೇಶ್ ಹೆಗಡೆ

Edited By :
PublicNext

PublicNext

25/07/2022 07:23 pm

Cinque Terre

33.22 K

Cinque Terre

0

ಸಂಬಂಧಿತ ಸುದ್ದಿ