ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೆಬ್ಬಾಳ ಟ್ರಾಫಿಕ್ ಜಾಮ್; ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ತಡೆಗೆ ಸಂಚಾರಿ ಪಥ ಮಾರ್ಗಸೂಚಿ

ದೇವನಹಳ್ಳಿ ಇಂಟರ್ನ್ಯಾಷನಲ್ ಏರ್ಪೋರ್ಟ್ ‌ನಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿನಿಂದ ದೇವನಹಳ್ಳಿ ಏರ್ಪೋರ್ಟ್ , ಚಿಕ್ಕಬಳ್ಳಾಪುರ ಬಳ್ಳಾರಿ, ಅನಂತಪುರಂ ಮತ್ತು ಹೈದರಾಬಾದ್ ಗೆ ತೆರಳಲು‌ ಪ್ರಮುಖವಾದದ್ದು ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್. ಪ್ರತಿದಿನ ಈ ಜಂಕ್ಷನ್ ಮಾರ್ಗವಾಗಿ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಏರ್ಪೋರ್ಟ್ ಗೆ ಹೋಗುವ ಮತ್ತು ಬರುವ ಪ್ರಯಾಣಿಕರಿಗೆ 29ಕಿ.ಮೀ.ರಸ್ತೆಯನ್ನ ಸಿಗ್ನಲ್ ಫ್ರೀ ಮಾಡಲಾಗಿದೆ. ಅದರೂ ಏರ್ಪೋರ್ಟ್ ರಸ್ತೆ ಮತ್ತು ಬೆಂಗಳೂರಿನ ಸಂಪರ್ಕ ಕೊಂಡಿ ಹೆಬ್ಬಾಳ ಮೇಲ್ಸೇತುವೆ ಮೇಲೆ ಟ್ರಾಫಿಕ್ ಜಾಮ್ ಮಾತ್ರ ಕಡಿಮೆಯಾಗಿಲ್ಲ.

ಆದ್ದರಿಂದ ಬೆಂಗಳೂರು ನಗರ ಸಂಚಾರಿ ಪೊಲೀಸರು ಕಳೆದ ನಾಲ್ಕು ವರ್ಷಗಳಿಂದ ಅಧ್ಯಯನ ನಡೆಸಿ ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್ನಿನ ಟ್ರಾಫಿಕ್ ಜಾಮ್ ನಿವಾರಣೆಗೆ ವಾಹನಗಳ ಹರಿವಿನಲ್ಲಿ ಬದಲಾವಣೆಗೆ ಮುಂದಾಗಿದ್ದಾರೆ. ಮುಖ್ರರಸ್ತೆಗಳ ಬದಲಿಗೆ ಸರ್ವೀಸ್ ರಸ್ತೆ ಬಳಸಬೇಕು. ಯಲಹಂಕ, ಕೊಡಿಗೇಹಳ್ಳಿ, ಕೆಂಪಾಪುರ, ಜಕ್ಕೂರು ಕಡೆಗಳಿಂದ ಬರುವ ಜನ ನೇರವಾಗಿ ಫ್ಲೈಓವರ್ ಹತ್ತುವ ಬದಲು LoopRamp ಬಳಸಿ ನಗರಕ್ಕೆ ಬರಲು ಸೂಚಿಸಲಾಗಿದೆ. ಬರುವ ಶುಕ್ರವಾರದಿಂದ ಈ ಆದೇಶ ಪಾಲನೆಯಾಗಲಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ.

ಇನ್ನು ನೇರವಾಗಿ ಎಕ್ಸ್‌ಪ್ರೆಸ್‌ವೇ ನಲ್ಲಿ ಬರುವ ವಾಹನ ಮಾತ್ರ ಹೆಬ್ಬಾಳ ಮೂಲಕ ನಗರ ತಲುಪಬಹುದು. ಏರ್ಪೋರ್ಟ್ ಎಲಿವೇಟೆಡ್ ಕಾರಿಡಾರ್‌ನಿಂದ ಬರುವ ಬಸ್‌ಗಳು ಹೆಬ್ಬಾಳ ಸರ್ಕಲ್‌ ಬಳಿ ನಿಗದಿತ ಸ್ಥಳದಲ್ಲೆ ಹತ್ತಿಸಿಕೊಂಡು ಬಸ್ ಬೇ ಲೂಪ್ Rampಗಿಂತ ಮುಂಚಿತವಾಗಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು. ಕೆ.ಆರ್ ಪುರ ಕಡೆಗೆ ಹೋಗುವುವರು ಸರ್ವೀಸ್ ರಸ್ತೆ ಬಳಸಿಕೊಳ್ಳಬೇಕು. ಏರ್‌ ಪೋರ್ಟ್ ಹೆದ್ದಾರಿ ಮೂಲಕ‌ ಕೆಂಪಾಪುರ ತಲುಪುವವರು ಯಲಹಂಕ ವಿದ್ಯಾಶಿಲ್ಪ, ಯಲಹಂಕ ಬೈಪಾಸ್ ಬಳಸಿಕೊಳ್ಳಬೇಕು. ಹೆಬ್ಬಾಳ ಬಸ್ ನಿಲ್ದಾಣದಲ್ಲಿ ಬಸ್‌ಗಳ ನಿಲುಗಡೆ ಸ್ಥಳ ಬದಲು, ಪಾದಾಚಾರಿ ರಸ್ತೆ ದಾಟಲು ವ್ಯವಸ್ಥೆ, ಅಡ್ಡಾದಿಡ್ಡಿ ವಾಹನ ನಿಲುಗಡೆ ನಿಷೇಧದ ಕ್ರಮಗಳು ಜುಲೈ 2ರಿಂದ ಹಂತಹಂತವಾಗಿ ಏರ್‌ಪೋರ್ಟ್ ರಸ್ತೆಯಲ್ಲಿ ಚಾಲ್ತಿಗೆ ಬರಲಿವೆ..

ಹೆಬ್ಬಾಳ ಜಂಕ್ಷನ್‌ನ ಟ್ರಾಫಿಕ್ ಜಾಮ್ ನಿವಾರಣೆಗೆ ಸುದೀರ್ಘ ಅಧ್ಯಯನ ನಡೆದಿದೆ. ಮೇಲ್ಸೇತುವೆ ಅಗಲೀಕರಣವನ್ನು ಸರ್ಕಾರ ಮಾಡಲಿದೆ. ಈಗ ಸದ್ಯ ಸಂಚಾರಿ ಪೊಲೀಸರು, BBMP, BMRCL, NHAಗಳು ಜಂಟಿ ಸಮಾಲೋಚನೆ ನಡೆಸಿ ರಸ್ತೆ ಸಂಚಾರದಲ್ಲಿ‌ ಕೆಲವು ಬದಲಾವಣೆ ಜಾರಿಗೆ ತಂದಿವೆ. ಹೆಚ್ಚುವರಿ ಪೊಲೀಸರ ನಿಯೋಜನೆ ಮತ್ತು ಪಥ ಬದಲಾವಣೆಯಿಂದ ಟ್ರಾಫಿಕ್ ಜಾಮ್ ಸಮಸ್ಯೆ ಸ್ವಲ್ಪ ಮಟ್ಟಿಗಾದರೂ ಹೆಬ್ಬಾಳ ಜಂಕ್ಷನ್‌ನ ಟ್ರಾಫಿಕ್ ಜಾಮ್ ಕಡಿಮೆಯಾಗಲಿ.

Edited By :
PublicNext

PublicNext

07/07/2022 01:08 pm

Cinque Terre

35.28 K

Cinque Terre

0

ಸಂಬಂಧಿತ ಸುದ್ದಿ