ಬಿಎಂಟಿಸಿಯಲ್ಲಿ ಉಂಟಾಗಿರುವ ಡೀಸೆಲ್ ಕೊರತೆಯನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ತಿಳಿಸಿದರು.
ಈ ಕುರಿತು ಕೇಂದ್ರ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿ, ಸಗಟು ವ್ಯಾಪಾರಿಗಳಿಂದ ಡೀಸೆಲ್ ಖರೀದಿ ಮಾಡಲಾಗುತ್ತಿತ್ತು. ಹೆಚ್ಚು ಖರೀದಿ ಮಾಡಿದರೆ, ಪ್ರತಿ ಲೀಟರ್ ಗೆ 32 ರೂ. ಹೆಚ್ಚಾಗುತ್ತಿತ್ತು. ಇದನ್ನು ತಪ್ಪಿಸಲು ಸಗಟು ಮಾರುಕಟ್ಟೆಯಿಂದ ಡಿಪೋ ಬಂಕ್ ಗಳಿಗೆ ಡೀಸೆಲ್ ಪೂರೈಕೆ ಮಾಡಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಬಿಎಂಟಿಸಿ ಡಿಪೋಗಳಲ್ಲಿ ಐದು ಆರು ದಿನಗಳಿಗೆ ಆಗುವಷ್ಟು ದಾಸ್ತಾನಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಇಲಾಖೆಗೂ ಪತ್ರ ಬರೆಯಲಾಗಿದೆ. ಪ್ರಯಾಣಿಕರಿಗೆ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳುತ್ತೇವೆ. ನಿತ್ಯ ನಮಗೆ 3.45 ಲಕ್ಷ ಲೀಟರ್ ಡೀಸೆಲ್ ಬೇಕಾಗಿದೆ ಎಂದು ತಿಳಿಸಿದರು.
PublicNext
27/06/2022 07:40 pm