ಕಳೆದ ಎರಡು ವರ್ಷದಿಂದ ಆಸ್ತಿ ತೆರಿಗೆ ಕಟ್ಟದೇ ವಂಚಿಸಿದ ಯಲಹಂಕ ವಲಯ ವಾರ್ಡ್ ಒಂದಕ್ಕೆ ಸೇರಿದ ಮಧುರಮಿಲನ- ಎಲಾನ್ ಕನ್ವೆನ್ಷನ್ ಸೆಂಟರ್ ನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಸ್ಥಳೀಯ ಅವಿನಾಶ್ ಎಂಬುವವರಿಗೆ ಸೇರಿದ ಮಧುರಮಿಲನವನ್ನ ಎಲಾನ್ ಸಂಸ್ಥೆಯು ಏಳು ವರ್ಷ ಲೀಜ್ ಗೆ ಪಡೆದಿದೆ. ಎರಡು ವರ್ಷಗಳಿಂದ ಸಂಸ್ಥೆ ಆಸ್ತಿ ತೆರಿಗೆ ಪಾವತಿಸಿಲ್ಲ. ವಿದ್ಯುತ್ ಬಿಲ್ ಸಹ ಪಾವತಿಸಿಲ್ಲ.
ಮೂರು ತಿಂಗಳಿಂದ ಎಲಾನ್ ಕನ್ವೆನ್ಷನ್ ಸೆಂಟರ್ ನಲ್ಲಿ ಅನೇಕ ಮದುವೆ, ಸಮಾರಂಭ ನಡೆದಿವೆ. ಒಂದು ತಿಂಗಳಲ್ಲಿ 20ಕ್ಕೂ ಹೆಚ್ಚು ಮದುವೆ ನಡೆದಿವೆ. ಒಂದು ಮದುವೆಗೆ 4ಲಕ್ಷಕ್ಕೂ ಅಧಿಕ ಬಿಲ್ ಮಾಡುವ ಕನ್ವೆನ್ಷನ್ ಸೆಂಟರ್ 10ಲಕ್ಷದಷ್ಟು ಆಸ್ತಿ ತೆರಿಗೆ ವಂಚಿಸಿದೆ.
ಎಲಾನ್ ಕನ್ವೆನ್ಷನ್ ಸೆಂಟರ್ 2020-21, 2021-22, 2022 & 23ಕ್ಕೆ ವರ್ಷಕ್ಕೆ ತಲಾ 3,47,489 ರಂತೆ ಎರಡು ವರ್ಷ ಆಸ್ತಿ ತೆರಿಗೆ ಜೊತೆ ಶೇ 9ರಷ್ಟು ಬಡ್ಡಿ ಕಟ್ಟಬೇಕು.ಒಟ್ಟು 10ಲಕ್ಷಕ್ಕು ಅಧಿಕ ಬಡ್ಡಿ ಕಟ್ಟಬೇಕಿದೆ. ಅವಿನಾಶ ಮಾಲೀಕತ್ವದ ಮಧುರ ಮಿಲನವನ್ಮು ನಾಗಾರ್ಜುನ್ ಲೀಜ್ ಗೆ ಪಡೆದು ಆಸ್ತಿ ತೆರಿಗೆ ಕಟ್ಟದೆ ಈಗ ಸಮಸ್ಯೆಯಾಗಿದೆ. ಇನ್ನು ಬೆಂಗಳೂರು ಉತ್ತರ ಭಾಗದಲ್ಲಿ ಪ್ರತಿಷ್ಠಿತ ಕಲ್ಯಾಣ ಮಂಟಪ ಆಸ್ತಿ ತೆರಿಗೆ ಕಟ್ಟಿಲ್ಲವೆನ್ನುವುದೇ ವಿಪರ್ಯಾಸ.
ಬೆಂಗಳೂರು ಮಹಾನಗರದಲ್ಲಿ ಆಸ್ತಿ ತೆರಿಗೆ ಕಟ್ಟದ ಮಾಲೀಕರಿಗೆ ಬಿಬಿಎಂಪಿ ಬಿಸಿ ಮುಟ್ಟಿಸಲು ಮುಂದಾಗಿದೆ. ಕೋಟ್ಯಾಂತರ ರೂಪಾಯಿ ಬಾಕಿ ಉಳಿಸಿಕೊಂಡವರಿಗೆ ಈ ಬಿಸಿ ಮುಟ್ಟಲಿದೆ.
PublicNext
23/06/2022 05:02 pm