ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಎಂಟಿಸಿ ಕಾರ್ಮಿಕರಿಗೆ ಈ ತಿಂಗಳ ಸಂಬಳವೇ ಡೌಟ್ ?

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಕ್ಷರಶಃ ಮುಳುಗುವ ಹಡಗಿ ನಂತಾಗಿದೆ.ಸರ್ಕಾರ ದೊಡ್ಡ ಮನಸು ಮಾಡಿ ನೆರವಿಗೆ ಧಾವಿಸದಿದ್ದರೆ ಬಿಎಂಟಿಸಿ ಪರಿಸ್ಥಿತಿ ಶೋಚನೀಯವಾಗಿ ಖಾಸಗೀಕರಣವೋ ಅಥವಾ ಮುಚ್ಚುವ ಭೀತಿಗೆ ಸಿಲುಕುವುದರಲ್ಲಿ ಅನುಮಾನವೇ ಇಲ್ಲ.ಇದರ ದುಷ್ಪರಿಣಾಮಕ್ಕೆ ಕಾರ್ಮಿಕರು ತುತ್ತಾಗುತ್ತಿರುವುದು ವಿಪರ್ಯಾಸ.

ಮೊದಲೆಲ್ಲ ತಿಂಗಳ ಮೊದಲ ವಾರದಲ್ಲಿ ಕಾರ್ಮಿಕರಿಗೆ ಸಂಬಳ- ಭತ್ಯೆ ಸಿಗುತ್ತಿದ್ದ ಪರಿಸ್ಥಿತಿ ಈಗ ಇಲ್ಲವಾಗಿದೆ.ಕಳೆದ ಕೆಲ ತಿಂಗಳಿಂದ ಕಾರ್ಮಿಕರಿಗೆ ಭತ್ಯೆ ಮನೆ ಹಾಳಾಗಿ ಹೋಗ್ಲಿ, ತಿಂಗಳ ಸಂಬಳ ನಿಯಮಿತವಾಗಿ ಆಗದಂಥ ಸ್ಥಿತಿ ನಿರ್ಮಾಣವಾಗಿದೆ.ಆ ಸಂಪ್ರದಾಯ ಈ ತಿಂಗಳು ಮುಂದುವರೆಯಲಿದೆ.ಏಕೆಂದರೆ ಆಡಳಿತ ಮಂಡಳಿಯೇ ಈ ಬಾರಿ ಬಿಎಂಟಿಸಿ ಕಾರ್ಮಿಕರಿಗೆ ಸಂಬಳ ಕೊಡೊಕ್ಕೆ ಖಜಾನೆಯಲ್ಲಿ ದುಡ್ಡೇ ಇಲ್ಲ ಎನ್ನುವ ಅಸಹಾಯಕತೆ ತೋಡಿಕೊಂಡಿದೆ.

ಹೌದು..ಕೇಳೊಕ್ಕೆ ಆಶ್ಚರ್ಯವಾಗಬಹುದು.ದಿನಂಪ್ರತಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವ ಪ್ಯಾಸೆಂಜರ್ಸ್‌ಗಳ ಸಂಖ್ಯೆ ಕ್ರಮೇಣ ಸುಧಾರಣೆಯಾಗುತ್ತಿದೆ. ಬಿಎಂಟಿಸಿ ಗಳಿಕೆಯೂ ಹಳಿಗೆ ಬರುತ್ತಿದೆ.ಎಲ್ಲವೂ ಸರಿಯಾಗಿರುವಾಗ ಸಂಬಳ ಕೊಡೊಕ್ಕೇನು ಬ್ಯಾನೆ ಎಂದು ಕೇಳಬಹುದು.ಆದ್ರೆ ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದ “ಅವ್ಯವಸ್ಥೆ”,ಅದರ ಪರಿಣಾಮವಾದ “ಆರ್ಥಿಕ ಅಶಿಸ್ತಿ”ನ ಪ್ರಭಾವ ಈಗಲೂ ಮುಂದುವರೆದುಕೊಂಡು ಬಂದಿದೆ.ಹಾಗಾಗಿನೇ ಎಲ್ಲವೂ ಸರಿಯಾಗುತ್ತಿರುವಾಗಲೇ ಆರ್ಥಿಕ ಹೊಡೆತದ ಕಾರಣಕ್ಕೆ ಸಂಬಳದ ದಿನಾಂಕದಲ್ಲೂ ಏರುಪೇರಾಗುತ್ತಿದೆ.

ಈ ಬಾರಿ ಬಿಎಂಟಿಸಿಯ 50 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಸಂಬಳ ನಿರೀಕ್ಷಿಸೋದೇ ತಪ್ಪಾಗಬಹುದು.ಏಕೆಂದರೆ ಕಾರ್ಮಿಕರಿಗೆ ಕೊಡೊಕ್ಕೆ ಖಜಾನೆಯಲ್ಲಿ ಹಣವೇ ಇಲ್ಲವಂತೆ.ಬರ್ತಿರೋ ಗಳಿಕೆಯ ಶೇಕಡಾ 65 ರಷ್ಟು ಪ್ರಮಾಣ ಇಂಧನಕ್ಕೆ ಹೋಗುತ್ತಿದೆಯಂತೆ.ಮಾಡಿಕೊಂಡಿರುವ ಸಾಲಕ್ಕೆ ಬಡ್ಡಿ ಕಟ್ಟೊಕ್ಕೆ ಮತ್ತೊಂದಷ್ಟು ಹಣ ಖರ್ಚಾಗುತ್ತಿದೆ.ಉಳಿದಿದ್ದರಲ್ಲಿ ಬಸ್ ಗಳ ಮೆಂಟೆನೆನ್ಸ್ ಹಾಗೂ ಇತರೆ ಖರ್ಚುಗಳನ್ನು ನೋಡಿಕೊಳ್ಳಬೇಕಾಗಿ ಬಂದಿದೆ.ಈ ಬಾರಿಯೇ 50 ಕೋಟಿಗೂ ಹೆಚ್ಚು ಹಣದ ಕೊರತೆ ಎದುರಾಗಿರುವುದರಿಂದ ಸಂಬಳ ಹೇಗೆ ಕೊಡೋದಪ್ಪ ಎಂದು ತಲೆ ಮೇಲೆ ಕೈ ಹೊತ್ತು ಕೂತಿದ್ದೇವೆ ಎನ್ನುತ್ತಾರೆ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು.

ಸಂಬಳವನ್ನೇ ನಂಬಿ ಜೀವನ ನಡೆಸುತ್ತಿರುವ ಆ ದಿನಾಂಕಕ್ಕೇನೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಸಾರಿಗೆ ಕಾರ್ಮಿಕರಿಗೆ ಈ ತಿಂಗಳ ಸಂಬಳವೇ ಡೌಟ್ ಎನ್ನುವ ಸುದ್ದಿ ಗೊತ್ತಾದ್ರೆ ಅವರ ಪರಿಸ್ಥಿತಿ ಏನಾಗಬೇಡ ಹೇಳಿ.ಇವತ್ತು,ನಾಳೆ ಸಂಬಳ ಆಗಬಹುದು ಎಂದು ಕಾದು ಕೂತಿರುವ ಸಾರಿಗೆ ಕಾರ್ಮಿಕರು ಹಾಗೂ ಕುಟುಂಬಗಳಿಗೆ ಇದು ಅಘಾತಕಾರಿಯಾಗಿ ಪರಿಣಮಿಸಿದರೂ ಆಶ್ಚರ್ಯವಿಲ್ಲ.

ಗಣೇಶ್ ಹೆಗಡೆ ಪಬ್ಲಿಕ್ ನೆಕ್ಷ್ಟ್ ಬೆಂಗಳೂರು

Edited By :
PublicNext

PublicNext

03/06/2022 05:32 pm

Cinque Terre

34.13 K

Cinque Terre

0

ಸಂಬಂಧಿತ ಸುದ್ದಿ