ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಮ್ಮ ಮೆಟ್ರೋ ದಿನದ ಪಾಸ್ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ

ನಮ್ಮ ಮೆಟ್ರೋ’ದಲ್ಲಿ ಒಂದು ದಿನ ಹಾಗೂ ಮೂರು ದಿನಗಳ ಪಾಸು ವ್ಯವಸ್ಥೆ ಜಾರಿಗೊಳಿಸಿದ ಬೆನ್ನಲ್ಲೇ ಈ ಮಾದರಿಯ ಪಾಸುಗಳಿಗೆ ಹೆಚ್ಚು ಜನರನ್ನು ಕರೆತರಲು ಹೊಸ ಪ್ರಯಾಣಿಕರ ವರ್ಗದ ಕಡೆಗೆ ನೋಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌), ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಏಜೆನ್ಸಿಗಳೊಂದಿಗೆ ಕೈಜೋಡಿಸಲು ಚಿಂತನೆ ನಡೆಸಿದೆ. ಆದರೆ ದಿನದ ಪಾಸ್ ಹಾಗೂ ಮೂರು ದಿನದ ಪಾಸ್ ಪ್ರಯಾಣಿ ಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತ ವಾಗಿದೆ.

ನಿತ್ಯ ಕೇವಲ 50-80 ಪಾಸ್ ಗಳ ಖರೀದಿ ಆಗುತ್ತಿದೆ. ಕಾರಣ ದುಬಾರಿ ಬೆಲೆಯ ಪಾಸ್ ಗಳು. ಹೌದು .. ಬಿಎಂಟಿಸಿ ಹಾಗೂ ಇತರ ಸಾರಿಗೆ ವ್ಯವಸ್ಥೆ ಹೊಲೀಸಿದ್ರೆ ಬಿಎಂಆರ್ ಸಿಎಲ್ ಪಾಸ್ ಬೆಲೆ ದುಬಾರಿ. ಹೀಗಾಗಿ ಜನರು ಇದರ ಖರೀದಿಗೆ ಮುಂದಾಗುತ್ತಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಂಆರ್ ಸಿಎಲ್ ಅಧಿಕಾರಿಗಳು ಅನ್ಯ ರಾಜ್ಯದಲ್ಲಿ ಇರುವ ದರವನ್ನೇ ಇಲ್ಲು ಕೂಡಾ ಪ್ರಕಟಿಸಲಾಗಿದೆ. ಅನ್ಯ ಸಾರಿಗೆಗೂ ನಮ್ಮ ಮೆಟ್ರೋ ಬಹಳ ವತ್ಯಾಸ ಇದೆ. ಸದ್ಯ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ಬಂದ್ರು ಮುಂದೆ ಬಹಳ ಜನರು ಇದನ್ನು ಉಪಯೋಗಿಸುವ ವಿಶ್ವಾಸ ಇದೆ ಎಂದರು.

Edited By :
Kshetra Samachara

Kshetra Samachara

11/04/2022 07:13 pm

Cinque Terre

3.69 K

Cinque Terre

0

ಸಂಬಂಧಿತ ಸುದ್ದಿ