ಇಂದಿರಾ ಕ್ಯಾಂಟೀನ್ ನಿರ್ವಹಿಸಲು ಪಾಲಿಕೆ ಬಜೆಟ್ನಲ್ಲಿ 60 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ. ಈ ನಡುವೆ ಕ್ಯಾಂಟೀನ್ ನಿರ್ವಹಣೆಯ ಸಂಬಂಧ ಪಾಲಿಕೆ ಅಧಿಕಾರಿಗಳು ಮತ್ತು ಇಸ್ಕಾನ್ ದೇವಸ್ಥಾನದ ಆಡಳಿತ ಮಂಡಳಿಯ ಮಧ್ಯೆ ಮಾತುಕತೆ ನಡೆಯುತ್ತಿದೆ ಎನ್ನುವ ಮಾಹಿತಿ ದೊರೆತಿದೆ. ಅದಮ್ಯ ಚೇತನ ಹೊರತುಪಡಿಸಿ ಉಳಿದ ಸಂಸ್ಥೆಗಳ ಮೇಲೆ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.
ಹೀಗಾಗಿ, ಊಟ, ಉಪಹಾರ ಪೂರೈಸುವ ಗುತ್ತಿಗೆಯನ್ನು ಇಸ್ಕಾನ್ನ ಅಕ್ಷಯ ಪಾತ್ರೆ ಯೋಜನೆಯ ಹೆಗಲಿಗೆ ನೀಡಲು ತೀರ್ಮಾನಿಸಿದ್ದೇವೆ. ಈ ಸಂಬಂಧ ಪಾಲಿಕೆ ಮತ್ತು ಇಸ್ಕಾನ್ ಪದಾಧಿಕಾರಿಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಶೆಫ್ಟಾಕ್ ಸಂಸ್ಥೆ 96 ಕ್ಯಾಂಟೀನ್ಗಳ ನಿರ್ವಹಣೆ ಮಾಡುತ್ತಿದ್ದು, ರಿವಾರ್ಡ್ಸ್ 49, ಅದಮ್ಯ ಚೇತನ ಸ್ವಯಂ ಸೇವಾ ಸಂಸ್ಥೆ 40 ಕ್ಯಾಂಟೀನ್ ನಿರ್ವಹಣೆ ಮಾಡುತ್ತಿದೆ. ಆಗಸ್ಟ್ನಲ್ಲಿ ಎಲ್ಲ ಸಂಸ್ಥೆಗಳ ಗುತ್ತಿಗೆ ಅವಧಿ ಮುಗಿಯಲಿದೆ. ಇಂದಿರಾ ಕ್ಯಾಂಟೀನ್ ಬಡವರಿಗೆ ಕಡಿಮೆ ದರಕ್ಕೆ ಊಟ ಒದಗಿಸುತ್ತಿದ್ದು, ಗುಣಮಟ್ಟದ ಆಹಾರ ಪೂರೈಸುತ್ತಿಲ್ಲ ಎಂಬ ಆರೋಪ ಹಲವು ಬಾರಿ ಕೇಳಿ ಬಂದಿದೆ. ಇದರ ನಡುವೆಯೇ ಪಾಲಿಕೆ ಇನ್ನೂ 57 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ.
ವರದಿ – ಗಣೇಶ್ ಹೆಗಡೆ, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
09/04/2022 12:28 pm