ಚಾಮರಾಜಪೇಟೆ ಮೈದಾನ ವಿಚಾರ ದಿನೇ ದಿನೇ ಗೊಂದಲದ ಗೂಡಾಗಿ ಪರಿಣಮಿಸುತ್ತಿದೆ. ಸರ್ವೇ ಇಲಾಖೆಯಲ್ಲಿ ಮೂಲ ದಾಖಲೆ ಹುಡುಕುವ ಕೆಲಸವನ್ನು ಬಿಬಿಎಂಪಿ ಮಾಡ್ತಿದೆ. ಇತ್ತ ವ್ಹಕ್ಫ್ ಬೋರ್ಡ್ ಇದು ನನ್ನ ಆಸ್ತಿ ಅನ್ನೋದಕ್ಕೆ ಏನು ಸಾಕ್ಷಿ ಇದೆ ಅನ್ನೋದನ್ನ ದಾಖಲೆ ನೀಡಿ ಅಂತ ಬಿಬಿಎಂಪಿ ಜಂಟಿ ಆಯುಕ್ತರು ನೋಟೀಸ್ ನೀಡಿದ್ದಾರೆ. ಹಿಂದೂ ಕಾರ್ಯಕ್ರಮಗಳಿಗೆ ಅನುಮತಿ ಕೊಡದಿದ್ರೆ, ಕಾನೂನು ಹೋರಾಟಕ್ಕೆ ಸಿದ್ಧ ಎಂದ ಹಿಂದೂ ಸಂಘಟನೆಗಳು. ಈ ಕುರಿತ ಡಿಟೇಲ್ಸ್ ಇಲ್ಲಿದೆ..
ಚಾಮರಾಜಪೇಟೆ ಮೈದಾನ ವಿವಾದಕ್ಕೆ ಹೊಸಹೊಸ ಟ್ವೀಸ್ಟ್ ಸಿಗುತ್ತಿದೆ. ಒಂದು ಕಡೆ ಇದು ನಮ್ಮ ಆಸ್ತಿ ಅಂತ ಬಿಬಿಎಂಪಿ ಹೇಳ್ತಿದ್ದು, ವರ್ಕ್ಫ್ ಬೋರ್ಡ್ ಇದು ನಮ್ಮ ಸ್ವತ್ತು ಅಂತಿದೆ. ಇದ್ರ ನಡುವೆ ಇಂದು ಬಿಬಿಎಂಪಿ ವಿಶೆಷ ಆಯುಕ್ತ ರವೀಂದ್ರ ಅವರು, ಬಿಬಿಎಂಪಿ ಬಳಿ ಮೂಲ ದಾಖಲೆಗಳು ಇಲ್ಲ. ಸರ್ವೇ ಇಲಾಖೆಯಲ್ಲಿ ಮೂಲ ದಾಖಲೆ ಹುಡುಕುವ ಕೆಲ್ಸ ಮಾಡಲಾಗ್ತಿದೆ. ಈಗಾಗಲೇ ಇದು ಆಟದ ಮೈದಾನ ಎಂದು ಉಲ್ಲೇಖವಿದ್ದು, ಕಾರ್ಯಕ್ರಮ ಮಾಡುವವರು ಮನವಿ ಪತ್ರ ನೀಡಲಿ, ಬಿಬಿಎಂಪಿ, ಪೊಲೀಸ್ ಇಲಾಖೆ ಜತೆ ಸಭೆ ಬಳಿಕ ತೀರ್ಮಾನ ಕೈಗೊಳ್ಳಲಾಗುತ್ತೆ ಅಂದಿದ್ದಾರೆ.
ವರ್ಕ್ಫ್ ಬೋರ್ಡ್ ಚಾಮರಾಜಪೇಟೆ ಮೈದಾನವನ್ನ ನನ್ನ ಆಸ್ತಿ ಅಂತಾ ಹೇಳ್ತಿರೋ ಹಿನ್ನಲೆ, ಇದು ಇದು ನಿಮ್ಮ ಆಸ್ತಿ ಅನ್ನೋದಾದ್ರೆ, ದಾಖಲೆ ನೀಡಿ ಅಂತಾ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ನೊಟೀಸ್ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ, ಯೋಗ ದಿನಾಚರಣೆಗೆ ಮೈದಾನದಲ್ಲಿ ಅವಕಾಶ ಕೊಡಿ ಅಂತಾ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ. ಈ ಹಿನ್ನಲೆ ಪಶ್ಚಿಮ ವಲಯದ ಜಂಟಿ ಆಯುಕ್ತರ ಕಚೇರಿಗೆ ಭೇಟಿ ನೀಡಿದ ವಿಶ್ವ ಸನಾತನ ಹಿಂದು ಪರಿಷತ್, ಒಂದು ಅನುಮತಿ ಕೊಡಿ, ಇಲ್ಲಾ ಅನುಮತಿ ಕೊಡಲ್ಲ ಅಂತಾದ್ರೂ ಹೇಳಿ ಅಂತಾ ಮನವಿ ಮಾಡಿದ್ರು. ಇನ್ನು ಅನುಮತಿಗಾಗಿ ಕೋರ್ಟ್ ಗೆ ಹೋಗೋದಕ್ಕೆ ಸಹ ಸಿದ್ಧ ವಿಶ್ವ ಸನಾತನ ಹಿಂದೂ ಪರಿಷತ್ ಹೇಳಿದೆ.
ಅತ್ತ ಗುರುವಾರದ ಒಳಗೆ ಅನುಮತಿ ಕೊಡುವ ಬಗ್ಗೆ ತಿಳಿಸಬೇಕು ಅಂತಾ ಹಿಂದೂ ಸಂಘಟನೆಗಳು ಡೆಡ್ ಲೈನ್ ನೀಡಿವೆ. ಇತ್ತ ಬಿಬಿಎಂಪಿ ತನ್ನ ಮೂಲ ದಾಖಲೆಗಳನ್ನು ಪತ್ತೆ ಹಚ್ಚುವಲ್ಲಿ ತಿಣಕಾಡುತ್ತಿದೆ. ಗುರುವಾರದ ನಂತರ ಚಾಮರಾಜಪೇಟೆ ವಿವಾದ ಎಲ್ಲಿಗೆ ಬರುತ್ತೆ ಅಂತಾ ಕಾದು ನೊಡ್ಬೇಕು...
ಗಣೇಶ್ ಹೆಗಡೆ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
Kshetra Samachara
15/06/2022 08:33 pm