ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶ್ರೀ ಗಣೇಶ ಮೆರವಣಿಗೆ ಸಾಲು ಸಾಲು; ಪೊಲೀಸರ ಸರ್ಪಗಾವಲು

ಗಣಪತಿ ಹಬ್ಬ ಕಳೆದು 11 ದಿನ ಆದ್ರೂ ನಗರದಲ್ಲಿ ಶ್ರೀ ಗಣೇಶೋತ್ಸವದ ಅಬ್ಬರ, ಆಡಂಬರ‌ ಕಡಿಮೆ ಆಗಿಲ್ಲ. ಇಂದು ಮತ್ತು ನಾಳೆ ಗಣೇಶ ಮೆರವಣಿಗೆ ನಗರದಲ್ಲಿ ಹೆಚ್ಚಾಗಿದ್ದು, ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸ್ರು ಕಣ್ಣಿಟ್ಟಿದ್ದಾರೆ. ಅದ್ರಲ್ಲೂ ಚಾಮರಾಜಪೇಟೆ, ಬ್ಯಾಟರಾಯನಪುರ ಮತ್ತು ಜೆಜೆಆರ್ ನಗರ ವ್ಯಾಪ್ತಿಯ ಗಣೇಶ ಮೂರ್ತಿ ಮೆರವಣಿಗೆಗೆ ಸಾಕಷ್ಟು ಪೊಲೀಸ್ರು ನಿಯೋಜನೆಗೊಂಡಿದ್ದಾರೆ‌.

ಚಾಮರಾಜಪೇಟೆಯ ಹಿಂದೂ ಮಹಾಸಭಾದ ಗಣಪತಿ ಮೆರವಣಿಗೆ ಚಾಮರಾಜ ಪೇಟೆಯ ಪ್ರಮುಖ ರಸ್ತೆಗಳಲ್ಲಿ ನಡೆಯಲಿದ್ದು, ಡಿಸಿಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ 1500ಕ್ಕೂ ಹೆಚ್ಚು ಪೊಲೀಸ್ರು ನಿಯೋಜನೆಗೊಂಡಿದ್ದಾರೆ. ಈದ್ಗಾ ಮೈದಾನದ ಬಳಿ ಮೆರವಣಿಗೆ ಮಾಡ್ತಿರೋ ಆಯೋಜಕರು ಮೆರವಣಿಗೆಯಲ್ಲಿ ಸಾವರ್ಕರ್ ಹಾಗೂ ಹರ್ಷ, ಪ್ರವೀಣ್ ನೆಟ್ಟಾರು ಫೋಟೋ ಬಳಸಿ ಮೆರವಣಿಗೆ ನಡೆಸಿದ್ರು.

ಇದೇ ಮೊದಲ ಬಾರಿಗೆ ಬ್ಯಾಟರಾಯನಪುರದಲ್ಲೂ ಗಣೇಶ ಮೆರವಣಿಗೆಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, 400ಕ್ಕೂ ಹೆಚ್ಚು ಪೊಲೀಸ್ರು ನಿಯೋಜನೆಗೊಂಡಿದ್ದಾರೆ. ಟೌನ್ ಹಾಲ್ ನಿಂದ ಮೈಸೂರು ರಸ್ತೆವರೆಗೂ 60ಕ್ಕೂ ಹೆಚ್ಚು ಗಣೇಶ ಮೆರವಣಿಗೆ ನಡೆಯಲಿದ್ದು, ಈ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗೋ ನಿರೀಕ್ಷೆಯಿದೆ. ಮಾರ್ಕೆಟ್ ನ ಬುಲಾಲ್ ಮಸೀದಿ ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್ರು ಬಿಗಿ ಭದ್ರತೆ ಮಾಡಿಕೊಂಡಿದ್ದಾರೆ.

- ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

10/09/2022 08:26 pm

Cinque Terre

38.95 K

Cinque Terre

0

ಸಂಬಂಧಿತ ಸುದ್ದಿ