ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ

ಬೆಂಗಳೂರಿನಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹದೇವಪುರ ಕ್ಷೇತ್ರದ ಇಕೋ ಸ್ಪೇಸ್, ಸಾಕ್ರ ಆಸ್ಪತ್ರೆ, ಮುನೇಕೊಳಲ, ವರ್ತೂರು ಕೋಡಿ ಸೇರಿದಂತೆ ಹಲವಡೆ ಸಂಚರಿಸಿದರು.

ಬಳಿಕ ಮಾತನಾಡಿದ ಅವರು, ಕಳೆದೊಂದು ವಾರದಿಂದ ಮಹದೇವಪುರ, ಬೊಮ್ಮನಹಳ್ಳಿ ಭಾಗಗಳಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಈ ಭಾಗಗಳಲ್ಲಿ ಹೆಚ್ಚು ಕೆರೆಗಳು ಇರುವುದರಿಂದ ಅವು ಮಳೆ ನೀರಿನಿಂದ ರಾಜಕಾಲುವೆಗಳು ತುಂಬಿ ಹರಿಯುತ್ತಿದೆ ಎಂದರು.

ರಾಜಾಕಾಲುವೆಗಳ ದುರಸ್ತಿಗೆ 1500 ಕೋಟಿ ರೂ. ನೀಡಲಾಗಿದ್ದು, ಮಳೆ ನಿಂತ ನಂತರ ಕೆಲಸ ಕಾಮಗಾರಿ ಪ್ರಾರಂಭಿಸವುದಾಗಿ ತಿಳಿಸಿದರು. ರಾಜಕಾಲುವೆಗಳನ್ನು ಯಾರೇ ಒತ್ತುವರಿ ಮಾಡಿದ್ರೂ ತೆರವುಗೊಳಿಸುವುದಾಗಿ ಸೂಚಿಸಿದರು. ಶಾಶ್ವತ ರಾಜಕಾಲುವೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.

Edited By :
PublicNext

PublicNext

02/09/2022 01:37 pm

Cinque Terre

26.82 K

Cinque Terre

0

ಸಂಬಂಧಿತ ಸುದ್ದಿ