ಕಳೆದ ಕೆಲ ತಿಂಗಳಿನಿಂದ ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರು ಟೋಯಿಂಗ್ ಮಾಡುತ್ತಿಲ್ಲ. ಟ್ರಾಫಿಕ್ ಪೊಲೀಸರು ಟೋಯಿಂಗ್ ಗಾಡಿಯನ್ನ ಶೆಡ್‌ಗೆ ನಿಲ್ಲಿಸಿದ್ದೆ ನಿಲ್ಲಿಸಿದ್ದು, ವಾಹನ ಸವಾರರು ಶಿಸ್ತು ಬಿಟ್ಟು ಎಲ್ಲಂದ್ರೆ ಅಲ್ಲಿ ವೆಹಿಕಲ್ ಪಾರ್ಕ್ ಮಾಡೋಕೆ ರೂಡಿಯಾಗಿದ್ರು. ಇದ್ರಿಂದ ಉಳಿದ ಸವಾರರು ಕಿರಿಕಿರಿ ಅನುಭವಿಸುವಂತ ಸನ್ನಿವೇಶ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಸಂಚಾರ ಪೊಲೀಸರು ನೋ ಪಾರ್ಕ್ ವಾಹನ ನಿಲ್ಲಿಸೋರಿಗೆ ದಂಡಾಸ್ತ್ರಕ್ಕೆ ಮುಂದಾಗಿದೆ.
ನೋ ಪಾರ್ಕಿಂಗ್‌ನಲ್ಲಿ ಎಲ್ಲಿಯೇ ವೆಹಿಕಲ್ ನಿಲ್ಲಿಸಿದರೂ ನಿಮ್ಮ ವಾಹನಕ್ಕೆ ವೀಲ್ ಲಾಕ್ ಬೀಳುತ್ತೆ. ಲಾಕ್ ಮಾಡಿ ದಂಡಾಸ್ತ್ರ ಪ್ರಯೋಗ ಮಾಡ್ತಿದ್ದಾರೆ. ಈ ಮೂಲಕ ಅನಧಿಕೃತ ವಾಹನ ಪಾರ್ಕಿಂಗ್ ಮಾಡುವ ಸವಾರರಿಗೆ ನಗರಾದ್ಯಂತ ಬಿಸಿ ಮುಟ್ಟಿಸುವ ಕೆಲಸ ಮಾಡ್ತಿದ್ದಾರೆ.
PublicNext
02/08/2022 03:17 pm