ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಉಕ್ರೇನ್ ಯುದ್ಧ ನೆಲದಿಂದ ತಾಯ್ನಾಡಿಗೆ ವಾಪಸ್ಸಾದ ಕೇರಳದ ವಿದ್ಯಾರ್ಥಿಗಳು

ದೇವನಹಳ್ಳಿ: ಉಕ್ರೇನ್ ದೇಶದಲ್ಲಿ ಯುದ್ಧ ಆತಂಕ ದಿನೇ ದಿನೇ ಜಾಸ್ತಿಯಾಗ್ತಲೇ ಇದೆ. ಪರಿಣಾಮ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳಿದ್ದ ಭಾರತೀಯ ಮೂಲದ ಸಾವಿರಾರು ಜನ ತಾಯ್ನಾಡಿಗೆ ಆಗಮಿಸಿ ತಮ್ಮ ರಾಜ್ಯಗಳತ್ತೆ ಹೆಜ್ಜೆ ಹಾಕಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಕೇರಳದ 7 ಜನ ವಿದ್ಯಾರ್ಥಿಗಳ ತಂಡ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.ನಿನ್ನೆ ಉಕ್ರೇನ್ ನಿಂದ ದೆಹಲಿಗೆ ಆಗಮಿಸಿದ್ದ ಇವ್ರು, ವಿಶ್ರಾಂತಿ ಪಡೆದು ಇಂದು ಬೆಂಗಳೂರಿಗೆ ಬಂದಿಳಿದಿದ್ದಾರೆ.

ದೇವನಹಳ್ಳಿಯ ‌ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇವರು, ಬೆಂಗಳೂರಿಗೆ ತೆರಳಿ ಅಲ್ಲಿಂದ ಕೇರಳದ ತಮ್ಮ ಊರುಗಳತ್ತೆ ಮುಖ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ಆಪರೇಷನ್ ಗಂಗಾ ಯೋಜನೆಯಡಿ ಸಾವಿರಾರು ಜನ ವಿದ್ಯಾರ್ಥಿಗಳು ತಾಯ್ನಾಡಿಗೆ ಆಗಮಿಸುತ್ತಿದ್ದಾರೆ. ಯಾವುದೇ ಪ್ರಾಣಹಾನಿ ಇಲ್ಲದೇ ಎಲ್ಲಾ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ಸಾಗಲಿ ಅನ್ನೋದೇ ಎಲ್ಲರ ಮಹದಾಶೆ.

Edited By : Manjunath H D
PublicNext

PublicNext

04/03/2022 08:19 pm

Cinque Terre

31.41 K

Cinque Terre

0

ಸಂಬಂಧಿತ ಸುದ್ದಿ