ದೇವನಹಳ್ಳಿ: ಕಾರ್ಕಿವ್‌ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಭಾರತೀಯ ರಾಯಭಾರ ಕಚೇರಿ ಹಾಸ್ಟೆಲ್, ಬೇಸ್ಮೆಂಟ್, ಬಂಕರ್‌ಗಳಲ್ಲಿ ಅಡಗಿದ್ದ ವಿದ್ಯಾರ್ಥಿಗಳನ್ನು ಗಡಿಭಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ. ರೈಲುಗಳ ಮೂಲಕ ವಿದ್ಯಾರ್ಥಿಗಳನ್ನು ಗಡಿ ಭಾಗಕ್ಕೆ ಸ್ಥಳಾಂತರಿಸುವ ಕಾರ್ಯ ಯಶಸ್ವಿಯಾಗಿ ಸಾಗಿಸಲಾಗುತ್ತಿದೆ.
ನಿನ್ನೆಯಿಂದಲೇ ಭಾರತೀಯ ಎಂಬೆಸಿ ಬ್ಯಾಚ್ ವೈಸ್ ವಿದ್ಯಾರ್ಥಿಗಳನ್ನು ಶಿಫ್ಟ್ ಮಾಡುತ್ತಿದೆ. ಇಂದು ಸಹ ಸುಮಾರು 180ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಉಕ್ರೇನ್ ಗಡಿಗೆ ಶಿಫ್ಟ್ ಮಾಡಲಾಗುತ್ತಿದೆ. ಈಗಾಗಲೇ ಭಾರತೀಯ ವಿದ್ಯಾರ್ಥಿಗಳು ರೈಲಿನಲ್ಲಿ ಕುಳಿತು ತಮ್ಮ ಗಡಿಯತ್ತ ಸಾಗುತ್ತಿದ್ದಾರೆ. ತವರು ಸೇರಿದರೆ ಸಾಕು ಎಂದು ಹಂಬಲಿಸುತ್ತಿರುವ ವಿದ್ಯಾರ್ಥಿಗಳು, ಕೂರಲು ಜಾಗದ ಸಮಸ್ಯೆ, ತೊಂದರೆಗಳಿದ್ದರು ಅನುಸರಿಸಿಕೊಂಡು ಉಕ್ರೇನ್ ಗಡಿಗಳನ್ನು ತಲುಪುತ್ತಿದ್ದಾರೆ.
PublicNext
02/03/2022 06:49 pm