ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: : ಜಮೀನು ಕಸಿದುಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ಹೆದರಿ ರೈತ ಆತ್ಮಹತ್ಯೆ

ದೊಡ್ಡಬಳ್ಳಾಪುರ: ಬೇಸಾಯ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲದ ಮುಗ್ಧ ರೈತನೊಬ್ಬ ಪಿತ್ರಾರ್ಜಿತವಾಗಿ ಬಂದಿದ್ದ ಎರಡು ಎಕರೆ ಜಮೀನಿನಲ್ಲಿ ಕಷ್ಟಪಟ್ಟು ದುಡಿದು ನಾಲ್ಕು ಹೆಣ್ಣು ಮಕ್ಕಳ ಮದುವೆ ಮಾಡಿದ. ಅವನ ನೆಮ್ಮದಿ ಜೀವನಕ್ಕೆ ಕೆಐಎಡಿಬಿ ನೀಡಿದ ಭೂಸ್ವಾಧೀನದ ನೋಟಿಸ್ ಬೆಂಕಿ ಇಟ್ಟಿತ್ತು. ಭೂಮಿ ಕಳೆದುಕೊಳ್ಳುವ ಭಯದಲ್ಲಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಆದಿನಾರಾಯಣ ಹೊಸಹಳ್ಳಿ, ಕೊಡಿಹಳ್ಳಿ ಕೊನಘಟ್ಟ ಗ್ರಾಮದ ಸುಮಾರು 1034 ಎಕರೆ ಕೃಷಿ ಜಮೀನಲ್ಲಿ ಕೈಗಾರಿಕಾ ವಲಯಕ್ಕಾಗಿ ಭೂಸ್ವಾಧೀನ ಮಾಡಲು ಸರ್ಕಾರ ಮುಂದಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಪಿ) ಕೊನಘಟ್ಟದ ಗ್ರಾಮದ ಹನುಮಂತಗೌಡರವರಿಗೆ ಭೂಸ್ವಾಧೀನ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿತ್ತು, ನೋಟಿಸ್ ಬಂದ ಒಂದು ವಾರದಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು ಹನುಮಂತಗೌಡ, ತನ್ನ ಎರಡು ಎಕರೆ 20 ಗುಂಟೆ ಜಮೀನು ಉಳಿಸಿಕೊಳ್ಳಲು ಜನಪ್ರತಿನಿಧಿಗಳನ್ನ ಭೇಟಿ ತಮ್ಮ ನೋವು ತೊಡಿಕೊಂಡಿದ್ದರು. ಒಂದು ವೇಳೆ ಜಮೀನು ಕೈತಪ್ಪಿದ್ದಾರೆ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ಸಹ ನೀಡಿದ್ದರು, ದುರ್ದೈವದ ಸಂಗತಿ. ನೋಟಿಸ್ ಪತ್ರವನ್ನು ತಮ್ಮ ಜಮೀನಿನಲ್ಲಿ ಇಟ್ಟುಕೊಂಡು ನೇಣಿಗೆ ಶರಣಾಗಿದ್ದಾರೆ.

ಭೂಸ್ವಾಧೀನಕ್ಕೆ ರೈತರ ಒಪ್ಪಿಗೆ ಇಲ್ಲದೇ ಇದ್ದರೂ ಸರ್ಕಾರ ಬಲವಂತವಾಗಿ ಭೂಸ್ವಾಧೀನಕ್ಕೆ ಮುಂದಾಗಿದೆ, ಸರ್ಕಾರದ ಧೋರಣೆ ವಿರುದ್ಧ ರೈತರು ತಮ್ಮ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಜಮೀನಿನೊಂದಿಗೆ ರೈತರ ಭಾವನಾತ್ಮಕ ಸಂಬಂಧ ಇದೆ. ಪೂರ್ವಜರ ಸಮಾಧಿಗಳು ಹೊಲದಲ್ಲಿಯೇ ಇವೆ ಮತ್ತು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಲಗಳಲ್ಲಿ ಮನೆ ಕಟ್ಟಿದ್ದಾರೆ ಈಗ ಏಕಾಏಕಿ ಜಮೀನು ಸ್ವಾಧೀನಕ್ಕೆ ಮುಂದಾಗಿರುವುದು ರೈತರ ಅಕ್ರೋಶಕ್ಕೆ ಕಾರಣವಾಗಿ, ರಕ್ತ ಕೊಟ್ಟರು ಸರಿ ಜಮೀನು ಕೊಡುವುದಿಲ್ಲವೆಂದು ಹೋರಾಟಕ್ಕೆ ಇಳಿದಿದ್ದಾರೆ, ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮೋಹನ ಕುಮಾರಿ ಸರ್ಕಾರಕ್ಕೆ ವರದಿ ನೀಡುವುದಾಗಿ ಹೇಳಿದರು.

ಈಗಾಗಲೇ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ಸಾವಿರಾರು ಎಕರೆ ಜಮೀನನ್ನು ರೈತರಿಂದ ವಶಪಡಿಸಿಕೊಳ್ಳಲಾಗಿದೆ, ಆದರೆ ಇಲ್ಲಿಯವರೆಗೂ ಶೇಕಡಾ 50 ರಷ್ಟು ಕಾರ್ಖಾನೆ ಸ್ಥಾಪನೆಯಾಗಿಲ್ಲ, ಈಗ ಹೊಸದಾಗಿ ಕೈಗಾರಿಕಾ ಸ್ಥಾಪನೆಗಾಗಿ ರೈತರ ಜಮೀನು ಹೊಡೆಯಲು ಸ್ವಾಧೀನದ ನಾಟಕವಾಡುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಕೈಗಾರಿಕಾ ಸ್ಥಾಪನೆಗೆ ರೈತರರಿಂದ ವಶಪಡಿಸಿಕೊಳ್ಳುವ ಜಮೀನಲ್ಲಿ ಕೈಗಾರಿಕಾ ಸ್ಥಾಪನೆಯಾಗದೆ ಪಾಳು ಬಿದ್ದಿವೆ ಈಗ ಹೊಸದಾಗಿ ಕೈಗಾರಿಕಾ ಸ್ಥಾಪನೆಗಾಗಿ ಭೂಸ್ವಾಧೀನಕ್ಕಾಗಿ ಸರ್ಕಾರ ಮುಂದಾಗಿದೆ, ಅಂಗೈ ಅಗಲದ ಜಮೀನು ಇಟ್ಟುಕೊಂಡು ನೆಮ್ಮದಿಯ ಜೀವನ ಮಾಡುತ್ತಿದ್ದ ರೈತರನ್ನು ಬೀದಿಪಾಲು ಮಾಡಲು ಸರ್ಕಾರ ಸಾಕಷ್ಟು ಉತ್ಸಾಹ ತೋರಿಸುತ್ತಿದೆ.

Edited By :
PublicNext

PublicNext

21/04/2022 11:09 pm

Cinque Terre

49.91 K

Cinque Terre

1

ಸಂಬಂಧಿತ ಸುದ್ದಿ