ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಉರಗ ರಕ್ಷಕರಿಗೆ ಸಹಾಯ ಮಾಡಿ ಸ್ನೇಕ್ ಶ್ಯಾಂ ಸರ್ಕಾರಕ್ಕೆ ಮನವಿ

ನೆಲಮಂಗಲ: ನೆಲಮಂಗಲದಲ್ಲಿ ಹಾವಿನ ರಕ್ಷಣೆಗೆ ತೆರಳಿದ್ದ ವೇಳೆ ಹಾವು ಕಡಿತಕ್ಕೊಳಗಾಗಿದ್ದ ಉರಗರಕ್ಷಕ ಸ್ನೇಕ್ ಲೋಕೇಶ್ ಸಾವನ್ನಪ್ಪಿದ ಹಿನ್ನಲೆ ಮೈಸೂರಿನ ಸ್ನೇಕ್ ಶ್ಯಾಂ ಸರ್ಕಾರಕ್ಕೆ ಮನವಿಯೊಂದನ್ನ ಮಾಡಿದ್ದಾರೆ.

ಹಾವು ಸಂರಕ್ಷಣೆ ಮಾಡುವವರು ತನ್ನ ಪ್ರಾಣ ಒತ್ತೆ ಇಟ್ಟು ಸಮಾಜಕ್ಕೋಸ್ಕರ ದುಡಿಯುತ್ತಿದ್ದಾರೆ, ಫ್ಯಾಕ್ಟರಿ, ಗೋದಾಮು, ಮನೆಗಳಲ್ಲಿ ಹಾವುಗಳನ್ನ ಸಂರಕ್ಷಣೆ ಮಾಡಲು ಬಂದ ಉರಗ ರಕ್ಷಕರಿಗೆ ಗೌರವ ನೀಡಿ, ಹಾವುಗಳನ್ನ ಸಂರಕ್ಷಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಅಲ್ಲದೆ ಶಿವಮೊಗ್ಗದಲ್ಲಿ ಆನೆ ತುಳಿತಕ್ಕೆ ರೈತನೊಬ್ಬ ಮೃತ ಪಟ್ಟಾಗ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು. ಆಗಿನ ಮುಖ್ಯಮಂತ್ರಿ ಬಿ‌.ಎಸ್‌ ಯಡಿಯೂರಪ್ಪ ಕಾಡುಪ್ರಾಣಿಗಳ ದಾಳಿಗೆ ಒಳಗಾದವರಿಗೆ ಪರಿಹಾರ ಘೋಷಣೆ ಮಾಡಿದ್ರು. ಈ ಯೋಜನೆಯನ್ನ ಹಾವುಗಳನ್ನ ಸಂರಕ್ಷಿಸುವವರಿಗೂ ಜಾರಿ ಮಾಡಬೇಕು. ಹಾವು ಸಂರಕ್ಷಿಸುವಾಗ ಹಾವು ಕಡಿತಕ್ಕೊಳಗಾದವರಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಒದಗಿಸಬೇಕು ಎಂದು ಮೈಸೂರಿನಲ್ಲಿ ಸ್ನೇಕ್ ಶ್ಯಾಮ್ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

Edited By :
PublicNext

PublicNext

24/08/2022 11:31 am

Cinque Terre

24.33 K

Cinque Terre

0

ಸಂಬಂಧಿತ ಸುದ್ದಿ