ಬೆಂಗಳೂರು : ಇಂದು ಪವರ್ ಸ್ಟಾರ್ ಡಾ. ಪುನೀತ್ ರಾಜ ಕುಮಾರ್, ಕರುನಾಡ ಕಣ್ಮಣಿ, ಎಲ್ಲರ ನೆಚ್ಚಿನ ಅಪ್ಪು ಜನ್ಮದಿನ. ನೋವಿನ ಸಂಗತಿ ಎಂದರೆ ಅಪ್ಪು ಇಲ್ಲದೆ ಅಭಿಮಾನಿಗಳು ಜನ್ಮ ದಿನ ಆಚರಿಸುತ್ತಿದ್ದಾರೆ.
ಇನ್ನು ಅರಸನ ಬರ್ತ್ ಡೇ ದಿನವೇ ಅವರ ಕೊನೆಯ ಸಿನಿಮಾ 'ಜೇಮ್ಸ್' ಬಿಡುಗಡೆ ಆಗಿದೆ. ಇನ್ನು ಹುಟ್ಟುಹಬ್ಬದಂದು ಪುನೀತ್ ಅಭಿಮಾನಿಗಳು ತಮ್ಮ ನೆಚ್ಚಿನ ಅಪ್ಪು ಬಾಸ್ ಗೆ ವಿಶೇಷ ಗೌರವ ಸಲ್ಲಿಸಲು ತಯಾರಿ ನಡೆಸುತ್ತಿದ್ದಾರೆ .
ಜೆಪಿ ನಗರದಲ್ಲಿ ಅಪ್ಪು ಅಭಿಮಾನಿಗಳಿಂದ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸುತ್ತಿದ್ದು ಅಭಿಮಾನಿಗಳ ಸಂಭ್ರಮ ಕುರಿತು ನಮ್ಮ ವರದಿಗಾರ ನವೀನ್ ನ ನೀಡಿರುವ ವರದಿ ಇಲ್ಲಿದೆ.
Kshetra Samachara
17/03/2022 12:52 pm