ಬೆಂಗಳೂರು: ಕನ್ನಡ ಹಾಡು ಹಾಕುವ ವಿಚಾರಕ್ಕೆ ಬೆಂಗಳೂರಿನ ಖಾಸಗಿ ಪಬ್‌ನಲ್ಲಿ ಗಲಾಟೆ ನಿನ್ನೆ ತಡರಾತ್ರಿ ನಡೆದಿದೆ. ಪಬ್‌ಗಳಲ್ಲಿ ಕನ್ನಡ ಹಾಡುಗಳು ಹಾಕೋ ವಿಚಾರ ಗಲಾಟೆ ಹೊಸದೇನಲ್ಲ. ಯಾವಾಗಲೂ ಪಬ್‌ಗಳು ಕನ್ನಡ ಹಾಡುಗಳನ್ನು ಹಾಕೋದಿಲ್ಲ. ಅದನ್ನು ಪ್ರಶ್ನೆ ಮಾಡುವವರ ವಿರುದ್ಧ ಗಲಾಟೆ ಮಾಡುವುದು ನಗರದ ಪಬ್‌ಗಳಿಗೆ ಸಾಮಾನ್ಯವಾಗಿ ಹೋಗಿದೆ. ಇದೇ ರೀತಿ ನಿನ್ನೆ ರಾತ್ರಿ ಎಚ್ಎಸ್ಆರ್ ಲೇಔಟ್‌ನಲ್ಲಿರುವ ಖಾಸಗಿ ಪಬ್‌ನಲ್ಲಿ ಕನ್ನಡ ಹಾಡು ಹಾಕುವ ವಿಚಾರಕ್ಕೆ ಗಲಾಟೆ ಆಗಿದೆ. ಕನ್ನಡ ಹಾಡು ಹಾಕಲು ಪಬ್ ಸಿಬ್ಬಂದಿ 5000 ಹಣ ಕೇಳಿರುವ ಆರೋಪ ಕೇಳಿಬಂದಿದೆ.
ಕನ್ನಡ ಹಾಡು ಹಾಕಲು ಹಣ ಯಾಕೆ ನೀಡಬೇಕೆಂದು ಪ್ರಶ್ನೆ ಮಾಡಿದಾಗ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಗಲಾಟೆ ಜಾಸ್ತಿಯಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಎಚ್ಎಸ್ಆರ್ ಲೇಔಟ್ ಪೊಲೀಸರು ಗುಂಪು ಚದುರಿಸಿದ್ದಾರೆ. ಇಲ್ಲಿಯವರೆಗೂ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪಬ್‌ನ ವಿರುದ್ಧ ಯಾರು ದೂರು ನೀಡಿಲ್ಲ. ಒಟ್ಟಿನಲ್ಲಿ ಕನ್ನಡ ಹಾಡು ಕೇಳಿದರೆ ಪಬ್‌ಗಳ ಸಿಬ್ಬಂದಿ ಗ್ರಾಹಕರ ಮೇಲೆ ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚಾಗಿದೆ ಪೊಲೀಸರು ಇಂತಹ ಪಬ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
PublicNext
20/09/2022 01:47 pm