ಯಲಹಂಕ: 22 ರಿಂದ 72ರ ಪ್ರಾಯದ ಶ್ರೀಮತಿಯರ ಮಸ್ತ್ ರ‍್ಯಾಂಪ್ ವಾಕ್ ಕಣ್ಮನ ಸೆಳೆಯುವಂತಿತ್ತು. ಕರ್ನಾಟಕ ಹ್ಯಾಂಡ್ಲೂಮ್ಸ್ ಸೀರೆ ಉಟ್ಟು ರಾಜ್ಯದ ವಿವಿಧ ಸಂಸ್ಕೃತಿ, ಉಡುಪನ್ನ ಪರಿಚಯಿಸಿದ ಶ್ರೀಮತಿಯರ ಫ್ಯಾಶನ್ ಶೋ ಕಂಡು ನೆರೆದಿದ್ದ ಜನ ಫಿದಾ ಆದ್ರು..
ಮದುವೆಗೂ ಮುಂಚೆ ಫ್ಯಾಶನ್ ಶೋಗಳಲ್ಲಿ ತೊಡಗಿಸಿಕೊಂಡ ಅದೆಷ್ಟೋ ಜನ ಮದುವೆ ನಂತರ ಸಂಸಾರ ಮಕ್ಕಳು ಅಂತಾ ಬ್ಯುಸಿ ಆಗಿರ್ತಾರೆ. ಅಂತಹ ಮಹಿಳೆಯರಿಗೋಸ್ಕರ ಮಿಸೆಸ್ ಕರ್ನಾಟಕ ಫ್ಯಾಶನ್ ಶೋನ ಯಲಹಂಕದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಲಾಗಿತ್ತು.
ಯುವತಿಯರೇ ನಾಚುವಂತೆ 20,40,60,72ರ ವಯಸ್ಸಿನ ವಿವಾಹಿತ ಮಹಿಳೆಯರು ವೇದಿಕೆ ಮೇಲೆ ಹೆಜ್ಜೆಹಾಕಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ಇಳಕಲ್ ಸೀರೆ, ಕಣ್ಣುಸೀರೆ, ಕಸೂತಿ ಸೀರೆ, ಮೈಸೂರು ಸಿಲ್ಕ್ ಸೀರೆ ಹೀಗೆ ಬಗೆ ಬಗೆ ಶೈಲಿ ಸೀರೆ ಉಟ್ಟ ನಾರಿಯರ ವಾಕ್ ನೋಡುಗರ ಕಣ್ಮನ ಸೆಳೆಯಿತು. ಮೂರು ದಿನ ಮಹಿಳೆಯರಿಗೋಸ್ಕರ ಆಯೋಜಿಸಲಾಗಿದ್ದ, ಈ ಇವೆಂಟ್ ನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಮಹಿಳೆಯರು ಭಾಗವಹಿಸಿ ಕರ್ನಾಟಕದ ಸಾಂಪ್ರದಾಯಿಕ ಉಡುಗೆ ತೊಟ್ಟು ಪ್ರತಿಭೆ ಪ್ರದರ್ಶಿಸಿದ್ರು.
ಫ್ಯಾಷನ್ ಶೋ ಕೇವಲ ಯುವತಿಯರಿಗಷ್ಟೇ ಅಲ್ಲ. ಪ್ರತಿಭೆ, ಅವಕಾಶ ಇದ್ದರೆ ವಯಸ್ಸಿನ ಮಿತಿ ಅಡ್ಡ ಬರಲ್ಲ ಅನ್ನೋದನ್ನ ಯಲಹಂಕದ ಶ್ರೀಮತಿಯರ ಫ್ಯಾಷನ್ ಸಾಬೀತುಪಡಿಸಿತು..
ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ಯಲಹಂಕ
PublicNext
12/08/2022 02:58 pm