ಬೆಂಗಳೂರು: ಯಲಹಂಕ ಅಂದ ಕೂಡಲೇ ನೆನಪಾಗೋದು ನಾಡಪ್ರಭು ಕೆಂಪೇಗೌಡರ ಹಸಿರು ಕ್ರಾಂತಿ ಹಾಗೂ ಸಾವಿರ ಕೆರೆ ನಿರ್ಮಾಣ. ಈಗ ಅದೇ ಕೆಂಪೇಗೌಡರ ನಾಡಲ್ಲಿ ಹಳೆ ಇತಿಹಾಸ ಮತ್ತೆ ಸೃಷ್ಟಿಯಾಗಿದೆ. ಹೌದು, ಯಲಹಂಕ ಉಪನಗರ ಮತ್ತು ಅಟ್ಟೂರು ವಾರ್ಡ್ ಬೆಂಗಳೂರು ಮಹಾನಗರದಲ್ಲೇ ಅತಿ ಹೆಚ್ಚು ಪಾರ್ಕ್ ಗಳನ್ನು ಒಳಗೊಂಡ ಖ್ಯಾತಿ ಪಡೆದಿವೆ.
75ರಿಂದ 80 ಎಕರೆ ಪ್ರದೇಶದಲ್ಲಿ ಸಕಲ ಸೌಲಭ್ಯ ಒಳಗೊಂಡ ಪಾರ್ಕ್ ಗಳು ನಿರ್ಮಾಣವಾಗಿವೆ. 5 ಗುಂಟೆ, 10 ಗುಂಟೆ, ಅರ್ಧ ಎಕರೆ, 1, 2, 4ರಿಂದ 8 ಎಕರೆ ಪಾರ್ಕ್ ಗಳಲ್ಲಿ ಮಕ್ಕಳ ಆಟದ ಸಲಕರಣೆ, ವಾಕಿಂಗ್ ಟ್ರ್ಯಾಕ್, ಜಿಮ್ ಮತ್ತಿತರ ಸೌಕರ್ಯ ಈ 57 ಪಾರ್ಕ್ ಳಲ್ಲಿದೆ. ಕ್ರಿಕೆಟ್, ಪುಟ್ಭಾಲ್, ಸೈಕ್ಲಿಂಗ್ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಪಾರ್ಕ್ ಇಲ್ಲಿನ ಹೆಗ್ಗಳಿಕೆ.
ಯಲಹಂಕ ಉಪನಗರ ಮತ್ತು ಅಟ್ಟೂರು ವಾರ್ಡ್ ಲೇಔಟ್ ನಂತೆ ನಿರ್ಮಿಸಿರುವುದರಿಂದ ಇಲ್ಲಿ ಅತಿ ಹೆಚ್ಚು ಪಾರ್ಕ್‌ಗಳು ಅಭಿವೃದ್ಧಿ ಆಗಲು ಸಾಧ್ಯವಾಗಿದೆ. ಅಟ್ಟೂರು ವಾರ್ಡ್ 3ರ ವಿವೇಕಾನಂದ ಪಾರ್ಕ್ ಅತಿ ದೊಡ್ಡ ಪಾರ್ಕ್ ಆಗಿದ್ದರೆ, ಕೆಂಪೇಗೌಡ ಪಾರ್ಕ್ ಹೆಚ್ಚು ಜನದಟ್ಟಣೆ ಪಾರ್ಕ್.
ಇನ್ನು ಬಸವಲಿಂಗಪ್ಪ, ವಿಶ್ವೇಶ್ವರಯ್ಯ, ಸಿ.ವಿ.ರಾಮನ್, ಸೇವಾಲಾಲ್, ವೇಮನ ಹೀಗೆ ಉಪನಗರ ವಾರ್ಡ್ ನ 24 ಪಾರ್ಕ್ ಹಾಗೂ ಅಟ್ಟೂರು ವಾರ್ಡ್ ನ 33 ಪಾರ್ಕ್ ಗಳು ಜನಮೆಚ್ಚುಗೆ ಪಡೆದಿವೆ. 2010ರಿಂದ 2013ರ ಅವಧಿಯಲ್ಲಿ ರಾಜ್ಯದಲ್ಲೇ ಯಲಹಂಕ 2ನೇ ಮಾದರಿ ವಿಧಾನಸಭೆ ಕ್ಷೇತ್ರವಾದರೆ 4ನೇ ವಾರ್ಡ್ ಯಲಹಂಕ ಉಪನಗರ BBMP ಯಲ್ಲೇ 2ನೇ ಮಾದರಿ ವಾರ್ಡ್ ಎಂಬ ಹೆಸರು ಪಡೆದಿತ್ತು. ಇದಕ್ಕೆಲ್ಲ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಭಗೀರಥ ಶ್ರಮವೇ ಕಾರಣ ಅಂತಾರೆ ಉಪನಗರ ವಾರ್ಡ್ ನ ಮಾಜಿ ಕಾರ್ಪೊರೇಟರ್.
PublicNext
26/05/2022 01:31 pm