ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹುತಾತ್ಮರ ಸ್ಮಾರಕ ಸಂರಕ್ಷಣಾ ಸಮಿತಿಯಿಂದ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ

ಬೆಂಗಳೂರು: ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅದ್ದೂರಿಯಾಗಿ ಸಂಪನ್ನವಾಗಿದೆ.. ಇಡೀರಾಷ್ಟ್ರದ ಜನತೆ ಮನೆಮನೆಗಳಲ್ಲಿ ಸ್ವಾತಂತ್ರ್ಯ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುವ ಮೂಲಕ ಅಮೃತ ಮಹೋತ್ಸವವನ್ನು ಸಾರ್ಥಕ್ಯ ಗೊಳಿಸಿದ್ದಾರೆ...

ಈ ಸಂದರ್ಭದಲ್ಲಿ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿರುವ ಹುತಾತ್ಮರ ಸ್ಮಾರಕದ ಸಾನಿಧ್ಯದಲ್ಲಿ ಹುತಾತ್ಮರ ಸ್ಮಾರಕ ಸಂರಕ್ಷಣಾ ಸಮಿತಿ ಆಯೋಜನೆ ಮಾಡಿದ್ದ ಅರ್ಥಪೂರ್ಣ ಸ್ವಾತಂತ್ರ್ಯ ಮಹೋತ್ಸವ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ...

ಹೌದು... ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ‌ ಧುಮುಕಿ ತಾಯ್ನಾಡಿನ‌ ಮುಕ್ತಿಗಾಗಿ ಸ್ವಾತಂತ್ರ್ಯ ಪ್ರಾಪ್ತಿಗಾಗಿ ಬಲಿದಾನ ಗೈದವರೆಷ್ಟೋ, ತಮ್ಮ ಮನೆ ಮಠ, ಸರ್ವಸ್ವವನ್ನೂ ಕಳೆದುಕೊಂಡವರೆಷ್ಟೋ..‌ಅವರೆಲ್ಲರ ತ್ಯಾಗ ಬಲಿದಾನಗಳ ಪರಿಣಾಮವಾಗಿ ನಮ್ಮ‌ ದೇಶಕ್ಕೆ ಸ್ವಾತಂತ್ರ್ಯ ಪ್ರಾಪ್ತವಾಯಿತು.

ಅಂತಹ ಮಹಾನ್ ಚೇತನಗಳ ಸಾಲಿಗೆ ಬೆಂಗಳೂರಿನ ಶಾಮಣ್ಣ,‌ಬೇಟೆ ರಂಗಪ್ಪ,ಜಿ.ವಿ.ತಿರುಮಲಯ್ಯ,ಪ್ರಹ್ಲಾದ್ ಶೆಟ್ಟಿ,ಹಾಗೂ ಗುಂಡಪ್ಪ ಕೂಡಾ ಸೇರುತ್ತಾರೆ.. ಇವರೆಲ್ಲರೂ ಮಹಾತ್ಮಗಾಂಧೀಜಿಯವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಧುಮುಕಿ ತಮ್ಮ ಪ್ರಾಣಾರ್ಪಣೆಯನ್ನು ಮಾಡಿದ ಮಹನೀಯರು. ಇವರ ಸ್ಮರಣಾರ್ಥ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ...

ಇದರ ರಕ್ಷಣೆ ಮತ್ತು ನಿರ್ವಹಣೆಗಾಗಿ ರಚಿತವಾಗಿರುವ ಹುತಾತ್ಮರ ಸ್ಮಾರಕ ಸಂರಕ್ಷಣಾ ಸಮಿತಿ ಶರವಣ ಅವರ ಅಧ್ಯಕ್ಷತೆಯಲ್ಲಿ ಅನೇಕ ವರ್ಷಗಳಿಂದ ಸ್ಮಾರಕದ ಸಾನಿಧ್ಯದಲ್ಲಿ ಪ್ರತೀ ವರ್ಷ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಹುತಾತ್ಮರ ದಿನಾಚರಣೆ ಸೇರಿದಂತೆ ಎಲ್ಲಾ ರಾಷ್ಟ್ರೀಯ ಹಬ್ಬಗಳನ್ನೂ ನಡಸಿಕೊಂಡು ಬರುತ್ತಿದೆ..

ಈ ವರ್ಷ ಕೂಡಾ ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯ್ತು.. ಕಾರ್ಗಿಲ್ ಯುದ್ಧದಲ್ಲಿ ಹೋರಾಟಮಾಡಿ ಭಾರತಕ್ಕೆ ಜಯವನ್ನು ತಂದು ಕೊಟ್ಟ ವೀರಯೋಧ ಪ್ರಸನ್ನ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ ದೇಶಭಕ್ತಿಯ ಸಂದೇಶ ಸಾರಿದರು. ಪೊಲೀಸ್ ಅಧಿಕಾರಿ ಚನ್ನೇಗೌಡ, ಮಾಜಿ ಕಾರ್ಪೋರೇಟರ್ ಶಿವಕುಮಾರ್ ಹಾಗೂ ಲೀಲಾ ಶಿವಕುಮಾರ್, ಗಾಂಧಿವಾದಿ ಝಾನ್ಸಿ ಲಕ್ಷ್ಮೀ ರಾಣಿ, ಸಂರಕ್ಷಣಾ ಸಮಿತಿ ಅಧ್ಯಕ್ಷ ಶರವಣ..

Edited By : Somashekar
Kshetra Samachara

Kshetra Samachara

16/08/2022 05:55 pm

Cinque Terre

2.66 K

Cinque Terre

0

ಸಂಬಂಧಿತ ಸುದ್ದಿ