ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಹಿರಿಯ ನಾಗರಿಕರಿಗೆ ಊರಿನ ಗ್ರಾಮಸ್ಥರಿಂದ ಸನ್ಮಾನ!

ಆನೇಕಲ್: 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆನೇಕಲ್‌ನ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತುಗಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ, ಇಂದು 75 ವರ್ಷದ ಮೇಲ್ಪಟ್ಟ ಹಿರಿಯರಿಗೆ ಸನ್ಮಾನ ಮಾಡುವುದರ ಮೂಲಕ ಸ್ವತಂತ್ರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಮುತ್ತುಗಟ್ಟಿ ಗ್ರಾಮದ ಊರಿನ ಹಿರಿಯರು, ಶಾಲೆಯ ವಿದ್ಯಾರ್ಥಿಗಳು ಹಾಗೂ ಯುವಕರು, ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗುವುದರ ಮೂಲಕ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

ಇನ್ನು ಸ್ವಾತಂತ್ರ್ಯ ಹೋರಾಟದ ವೇಳೆ ತ್ಯಾಗ ಬಲಿದಾನಗಳ ಮತ್ತು ನಾಯಕರುಗಳ ಸ್ಮರಿಸುವ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು ಎಂದು ಸೊನ್ನಪ್ಪ ಉಪವಲಯ ಅರಣ್ಯ ಅಧಿಕಾರಿ ತಿಳಿಸಿದರು.

ಅಲ್ಲದೇ ಹಿರಿಯ ಪತ್ರಕರ್ತ ಆನಂದ್ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ನಮ್ಮ ಗ್ರಾಮದಲ್ಲಿ 75ನೇ ವರ್ಷದ ಸ್ವತಂತ್ರ ಅಮೃತ ಮಹೋತ್ಸವ ಕಾರ್ಯಕ್ರಮ ಮಾಡಿದ್ದು ಖುಷಿ ತಂದಿದೆ. ಇದೇ ರೀತಿ ಪ್ರತಿವರ್ಷದಲ್ಲೂ ಪ್ರಯತ್ನ ಮಾಡುತ್ತೇವೆ . ಅಲ್ಲದೆ ತ್ರಿವರ್ಣ ಧ್ವಜವನ್ನು ಕಟ್ಟೋದು ಮುಖ್ಯವಲ್ಲ ಅದನ್ನ ಗೌರವಿತವಾಗಿ ಗೌರವ ಸಲ್ಲಿಸುವುದು ಅತಿ ಮುಖ್ಯ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಅರಣ್ಯ ವಲಯದ ಉಪ ವಲಯ ಸೊನ್ನಪ್ಪ ಗೆರೆತನದಲ್ಲಿ ರಾಮಕೃಷ್ಣ ತಾಲೂಕು ಪಂಚಾಯಿತಿ ಸದಸ್ಯ ಪುಷ್ಪರಾಜ್ ಹಿರಿಯ ಪತ್ರಕರ್ತ ಆನಂದ್ ಅಧ್ಯಕ್ಷತೆಯನ್ನು ವಹಿಸಿದ್ದ ಶಶಿಕುಮಾರ್ ಅಪನಾಚಾರಿ ಊರಿನ ಪ್ರಮುಖರು ಭಾಗಿಯಾಗಿದ್ದರು

Edited By : Somashekar
PublicNext

PublicNext

15/08/2022 08:21 pm

Cinque Terre

38.99 K

Cinque Terre

0

ಸಂಬಂಧಿತ ಸುದ್ದಿ