ಬೆಂಗಳೂರು: ದೇಶಕ್ಕೆ ಜನತೆಯ ಶ್ರಮ, ಶ್ರದ್ಧೆ, ಅಭಿಮಾನ, ಬೆವರಿನ ಹನಿ ಮುಖ್ಯ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಅವರು ಇಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 75ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.
ದೇಶ ಮೊದಲು ಎನ್ನುವ ಭಾವನೆ ಇರಬೇಕು. ದೇಶ ಸ್ವಾಭಿಮಾನ ಸಂಕೇತ. ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ಸಿಂಹಾವಲೋಕನ, ಆತ್ಮಾವಲೋಕನದ ಅವಶ್ಯಕತೆ ಇದೆ
ಎಪ್ಪತ್ತೈದು ವರ್ಷಗಳಾದ ಹಿನ್ನೆಲೆಯಲ್ಲಿ ಹಿಂದಿರುಗಿ ನೋಡಬೇಕು. ನಡೆದು ಬಂದ ಈ ದಾರಿಯಲ್ಲಿನ ಕೊರತೆಗಳನ್ನು ಸರಿಪಡಿಸಿಕೊಂಡು ಅಮೃತ ಕಾಲಕ್ಕೆ ಕೊರತೆಗಳ್ನು ನೀಗಿಸಿ ಮುಂದೆ ಹೋಗಲು ಸಿಂಹಾವಲೋಕನ, ಆತ್ಮಾವಲೋಕನದ ಅವಶ್ಯಕತೆ ಇದೆ. ದೇಶಕ್ಕೆ ನಾನು ಏನು ಮಾಡಿದ್ದೇನೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ದೇಶಕ್ಕೆ ಚರಿತ್ರೆ ಇದೆ. ಚಾರಿತ್ಯ ಬೇಕಾಗಿದೆ. ಆಚಾರರಿದ್ದಾರೆ, ಬೇಕಾಗಿರುವುದು ಆಚರಣೆ, ಒಳ್ಳೆಯ ಆಚರಣೆ ದೇಶಕ್ಕೆ ಸದ್ಚಾರಿತ್ಯ ಕೊಡುತ್ತಿದೆ. . ಮುಂದಾಲೋಚನೆಯಲ್ಲಿ ಈ ದೇಶಕ್ಕೆ ಒಂದು ದೃಷ್ಟಿಕೋನ ಇದೆ ಎಂದರು.
PublicNext
15/08/2022 05:12 pm