ಚಾಮರಾಜಪೇಟೆ: ಮೂರ್ನಾಲ್ಕು ದಿನ ಉತ್ತರ ಕರ್ನಾಟಕ ಸುತ್ತಿದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಈಗ ಚಾಮರಾಜಪೇಟೆ ಕ್ಷೇತ್ರದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಲು ಮುಂದಾಗಿದ್ದಾರೆ.
ಗುರು ಸಿದ್ದರಾಮಯ್ಯ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಜನರನ್ನು ಸೇರಿಸುವುದಾ!? ಅಥವಾ ಡಿಕೆಶಿ ಹಿನ್ನಡೆಗೆ ದುಡಿಯುವುದಾ!? ತಾನೇ ಮುಸ್ಲಿಂ ಸಮುದಾಯದ ನೇತೃತ್ವ ವಹಿಸಿ, ಕಾಂಗ್ರೆಸ್ ಪಕ್ಷದಲ್ಲಿ ನಿರ್ಣಾಯಕ ಪಾತ್ರ ವಹಿಸುವುದಾ !? ಹೀಗೆ ಹಲವು ಪ್ರಶ್ನೆಗಳು ಜಮೀರ್ ಅಹ್ಮದ್ ಖಾನ್ ಸುತ್ತ ಗಿರಕಿ ಹೊಡೆಯುತ್ತಿವೆ.
ಜಮೀರ್ ನಿನ್ನೆ ಛಲವಾದಿಪಾಳ್ಯದ ಶ್ರೀಮಾರಮ್ಮ ದೇವಿ ಉತ್ಸವದಲ್ಲಿ ಪಾಲ್ಗೊಂಡು, ವಿಶೇಷ ಪೂಜೆ ಸಲ್ಲಿಸಿದರು. ಆಗಸ್ಟ್ 1ರ ಸೋಮವಾರ ಜಮೀರ್ ಹುಟ್ಟುಹಬ್ಬ. ಇದರ ಮುನ್ನಾ ದಿನ ಶ್ರೀ ಮಾರಮ್ಮ ದೇವಸ್ಥಾನದ ಟ್ರಸ್ಟ್ ಸಮಿತಿ, ಸ್ಥಳೀಯ ಕಾಂಗ್ರೆಸ್ ಮುಖಂಡರು, ಬೆಂಬಲಿಗರು ಶಾಸಕರಿಂದ ಕೇಕ್ ಕತ್ತರಿಸಿ, ಸನ್ಮಾನಿಸಿ, ಜನ್ಮದಿನದ ಶುಭಾಶಯ ತಿಳಿಸಿದರು.
ಈ ವೇಳೆ ಮಾತನಾಡಿದ ಜಮೀರ್, ಪ್ರೀತಿ- ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ಶ್ರೀ ಮಾರಮ್ಮ ದೇವಿ ಕೃಪೆ ಎಲ್ಲರ ಮೇಲಿರಲಿ ಎಂದು ಮತ ಸೆಳೆಯೋ ತಂತ್ರಗಾರಿಕೆ ಮೆರೆದರು.
- ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಚಾಮರಾಜಪೇಟೆ
PublicNext
31/07/2022 06:17 pm