ಆನೇಕಲ್ : ಡಾಕ್ಟರ್ ಬಿಆರ್ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಆನೇಕಲ್ ಪಟ್ಟಣದ ಪ್ರತಿಷ್ಠಿತ ವಿಧಾತ ಶಾಲೆಯಲ್ಲಿ ವಿ ದ ಪೀಪಲ್ ಆಫ್ ಇಂಡಿಯಾ ಸಂವಿಧಾನ ಕುರಿತ ನಾಟಕ ಆಯೋಜನೆ ಮಾಡಲಾಗಿತ್ತು. ಆನೇಕಲ್ ನಲ್ಲಿ ವಿ ದ ಪೀಪಲ್ ಆಫ್ ಇಂಡಿಯಾ ನಾಟಕವನ್ನು ಗಂಧದ ನಾಡು ,ಜನಪರ ವೇದಿಕೆ, ಗಮನ ಮಹಿಳಾ ಸಂಸ್ಥೆ ಹಾಗೂ ನಮ್ಮ ಆನೇಕಲ್ ಕಲ್ಯಾಣಿ ಸಹಭಾಗಿತ್ವದಲ್ಲಿ ಆಯೋಜನೆ ಮಾಡಲಾಗಿತ್ತು
ಇನ್ನು ಈ ಕಾರ್ಯಕ್ರಮದಲ್ಲಿ ಆನೇಕಲ್ ಪುರಸಭೆ ಅಧ್ಯಕ್ಷ ಪದ್ಮನಾಭ ಮಾತನಾಡಿ ಸಂವಿಧಾನ ಕುರಿತು ನಾಟಕ ನೋಡಿದ ಮೇಲೆ ಸಂವಿಧಾನದ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಆಸಕ್ತಿ ಮೂಡಿದೆಯೆಂದು ಸಂತಸ ವ್ಯಕ್ತಪಡಿಸಿದರು. ವಿಧಾತ ಶಾಲೆಯ ಮುಖ್ಯಸ್ಥ ಕುಮಾರಸ್ವಾಮಿ ಮಾತನಾಡಿ, ಆನೇಕಲ್ ಇತಿಹಾಸದಲ್ಲಿ ಸಂವಿಧಾನದ ಕುರಿತು ಈ ಮಟ್ಟಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮ ಯಾವತ್ತೂ ಆಗಿರಲಿಲ್ಲ. ಆದರೆ, ಇವತ್ತು ನಾಟಕದ ಮೂಲಕ ಸಂವಿಧಾನದ ಕುರಿತ ನಾಟಕ ನಮ್ಮ ವಿಧಾತ್ ಶಾಲೆಯಲ್ಲಿ ಆಯೋಜನೆಗೊಂಡಿದ್ದು, ನಮ್ಮ ಪುಣ್ಯವೆಂದು ಅಭಿಮಾನ ವ್ಯಕ್ತಪಡಿಸಿದ್ದಾರೆ.
PublicNext
15/04/2022 07:29 pm