ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಸ್ತೆ ಮಾಡಿಕೊಡಿ ಇಲ್ಲಾಂದ್ರೆ ದಯಮರಣ ನೀಡಿ: ಗ್ರಾ.ಪಂ ಸದಸ್ಯ ಅದೂರು ಪ್ರಕಾಶ್ ಜಿಲ್ಲಾಧಿಕಾರಿಗೆ ಮನವಿ

ಆನೇಕಲ್: ಎಷ್ಟೋ ಜನರು ರಸ್ತೆಯಲ್ಲಿ ಬಿದ್ದು ಕಾಲು ಮುರಿದುಕೊಂಡಿದ್ದಾರೆ ಸ್ವಾಮಿ ರಸ್ತೆ ಮಾಡಿಕೊಡಿ ಇಲ್ಲಾಂದ್ರೆ ದಯಮರಣ ಕೋಡಿ ನಿಮಗೆ ಕಾಲು ಬೀಳ್ತೀನಿ ನಮಗೆ ರಸ್ತೆ ಮಾಡಿಕೊಡಿ ಎಂದು ಇಂಡ್ಲವಾಡಿ ಗ್ರಾಮದ ಪಂಚಾಯಿತಿ ವ್ಯಾಪ್ತಿಯ ಚೂಡಹಳ್ಳಿ ಗ್ರಾಮದ ಪಂಚಾಯಿತಿ ಸದಸ್ಯ ಅದೂರು ಪ್ರಕಾಶ್ ಬಹಿರಂಗಸಭೆಯಲ್ಲಿ ಕಾಲಿಗೆ ಬೀಳುವ ಮೂಲಕ ತಮ್ಮ ಮನವಿ ಸಲ್ಲಿಸಿದ್ದಾರೆ.

ಆನೇಕಲ್ ತಾಲೂಕಿನ ಇಂಡ್ಲವಾಡಿ ಪುರದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು. ಇನ್ನು ಈ ಕಾರ್ಯಕ್ರಮದಲ್ಲಿ ಚೂಡಹಳ್ಳಿ ಗ್ರಾಮದ ಸದಸ್ಯ ಪ್ರಕಾಶ್ ಜಿಲ್ಲಾಧಿಕಾರಿ ಮಂಜುನಾಥ್ ರವರ ಬಳಿ ತಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.. ಸ್ವಾಮಿ ನೂರಾರು ವರ್ಷಗಳಿಂದ ಕಾಡಂಚಿನ ಗ್ರಾಮವಾಗಿರುವ ಚೂಡಹಳ್ಳಿ ಗ್ರಾಮ ನಮ್ಮದು ಅರಣ್ಯ ಪ್ರದೇಶದ ಮಧ್ಯೆ ಭಾಗದಲ್ಲಿ ರಸ್ತೆ ಹಾದು ಹೋಗುತ್ತದೆ 5 ಕಿಲೋಮೀಟರ್ ಉದ್ದದ ರಸ್ತೆ ಮಾಡಿಕೊಡಲು ಏಕೆ ಈ ಮೀನಮೇಶ‌ ಮಾಡತ್ತಿರಾ . ಬೇರೆ ಕಡೆ ಇದೇ ರೀತಿಯ ರಸ್ತೆ ಮಾಡಿ ಕೊಟ್ಟಿದ್ದೀರಾ. ಈ ಗ್ರಾಮವನ್ನ ಮಾತ್ರ ಏಕೆ ರೋಗ ಪೀಡಿತ ಗ್ರಾಮವನ್ನಾಗಿ ಮಾಡಲು ಹೊರಟಿದ್ದಿರಿ .. ರಸ್ತೆ ಮಾಡಿಕೊಡಲು ನಿಮಗೆ ಸಮಸ್ಯೆ ಏನು ಸ್ವಾಮಿ?ರಸ್ತೆ ಮಾಡಿಕೊಡಿ ಇಲ್ಲ ಗ್ರಾಮದ ನೂರು ಮಂದಿಗೆ ದಯಾಮರಣ ನೀಡಿ ನೂರು ಮಂದಿಯು ಸಾಯುತ್ತೇವೆ..ಇನ್ನು ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ

ಗ್ರಾಮದ 50 ಕ್ಕೂ ಹೆಚ್ಚು ಜನ ಬಂದಿದ್ದಾರೆ ‌ಅದರೆ ಯುವಕರಿಗೆ ಯಾರು ಹೆಣ್ಣು ಕೊಡುತ್ತಿಲ್ಲ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ವಿಧ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಕೆಲಸಗಳಿಗೆ ಹೋಗುತ್ತಿದ್ದಾರೆ ಅದರಲ್ಲೂ ವ್ಯವಸಾಯ ಮಾಡುತ್ತಿರುವ ರೈತಾಪಿ ಜನರು ಪಟ್ಟಣಕ್ಕೆ ಓಡಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಹೆಣ್ಣು ಮಕ್ಕಳನ್ನ ಯಾರು ಮದುವೆಯಾಗಲು ಮುಂದೆ ಬರುತ್ತಿಲ್ಲ ನಿಮ್ಮ ಕಾಲಿಗೆ ಬೀಳುತ್ತೇನೆ ರಸ್ತೆ ಮಾಡಿಕೊಡಿ ಎಂದು ಗ್ರಾಮ ಪಂಚಾಯತಿ ಸದಸ್ಯ ಅದೂರು‌ ಪ್ರಕಾಶ್ ಜಿಲ್ಲಾಧಿಕಾರಿಗಳ ಮುಂದೆ ಮನವಿ ಮಾಡಿಕೊಂಡರು .

Edited By : PublicNext Desk
Kshetra Samachara

Kshetra Samachara

27/05/2022 06:30 pm

Cinque Terre

1.72 K

Cinque Terre

0

ಸಂಬಂಧಿತ ಸುದ್ದಿ