ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿನೂತನ ಕಾರ್ಯ ಬ್ಯಾಂಕ್ ಸಿಬ್ಬಂದಿಗಳಿಗೆ ಕನ್ನಡ ಪುಸ್ತಕ

ಆನೇಕಲ್: ಬ್ಯಾಂಕ್ ಗೆ ಬರುವಂತಹ ಗ್ರಾಹಕರ ಬಳಿ ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲಿಯೇ ಮಾತನಾಡಿ ವ್ಯವಹರಿಸಬೇಕೆಂದು ಒತ್ತಾಯಿಸಿ ಆನೇಕಲ್ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಪುಸ್ತಕಗಳನ್ನ ನೀಡುವ ಮೂಲಕ ಜಾಗೃತಿ ಮುಡಿಸಲಾಯಿತು.

ಆನೇಕಲ್ ಪಟ್ಟಣದ ಕೆನರಾ ಬ್ಯಾಂಕ್ ನಲ್ಲಿನ ಸಿಬ್ಬಂದಿಗಳು ಹಾಗೂ ಬ್ಯಾಂಕ್ ಗೆ ಬಂದ ಗ್ರಾಹಕರಿಗೆ ಕನ್ನಡದ ಪುಸ್ತಕಗಳನ್ನ ಆನೇಕಲ್ ಕಸಾಪ ವತಿಯಿಂದ ವಿತರಿಸಲಾಯಿತು. ಬ್ಯಾಂಕ್ ಗಳಲ್ಲಿ ಹೊರ ರಾಜ್ಯದ ಅನ್ಯ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸವನ್ನ ಮಾಡುತ್ತಿದ್ದು, ಹಳ್ಳಿಗಾಡಿನ ಜನರು ಬ್ಯಾಂಕ್ಗಳಿಗೆ ಹೋದ ಸಂಧರ್ಭದಲ್ಲಿ ಸಮಸ್ಯೆ ಎದುರಿಸುವಂತಾಗಿದೆ.

ಇನ್ನೂ ಕೆಲ ಬ್ಯಾಂಕ್ ಗಳಲ್ಲಿ ಗ್ರಾಮೀಣ ಭಾಗದ ರೈತಾಪಿ ಜನರು ಬ್ಯಾಂಕ್ ಗಳಿಗೆ ತೆರಳಿದ ಸಂಧರ್ಭದಲ್ಲಿ ಸರಿಯಾದ ರೀತಿಯಲ್ಲಿ ಬ್ಯಾಂಕ್ ಸಿಬ್ಬಂದಿ ಸ್ಪಂದಿಸದೆ ಇರುವ ದೂರುಗಳ ಸಹ ಸಾಕಷ್ಟು ಬಾರಿ ಕೇಳಿ ಬಂದಿವೆ. ಇದರಿಂದ ಆನೇಕಲ್ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬ್ಯಾಂಕಿನಲ್ಲಿ ಪುಸ್ತಕ ಓದು ಕನ್ನಡಿಗ ಎಂಬ ಶೀರ್ಷಿಕೆ ಅಡಿಯಲ್ಲಿ ಬ್ಯಾಂಕ್ ಸಿಬ್ಬಂದಿಗಳಿಗೆ ಹಾಗೂ ಗ್ರಾಹಕರಿಗೆ ಕನ್ನಡದ ಪುಸ್ತಕಗಳನ್ನ ನೀಡುವ ಮೂಲಕ ಕನ್ನಡವನ್ನ ಉಳಿಸಿ ಬೆಳೆಸುವಂತೆ ಕೇಳಿಕೊಳ್ಳಲಾಗಿದೆ ಎಂದು ಆನೇಕಲ್ ಕಸಾಪ ಅಧ್ಯಕ್ಷ ಆದೂರು ಪ್ರಕಾಶ್ ತಿಳಿಸಿದರು.

Edited By : PublicNext Desk
Kshetra Samachara

Kshetra Samachara

26/05/2022 10:17 pm

Cinque Terre

2.47 K

Cinque Terre

0

ಸಂಬಂಧಿತ ಸುದ್ದಿ