--ಪ್ರವೀಣ್ ನಾರಾಯಣ ರಾವ್
ಬೆಂಗಳೂರು ನಾಡಿನಾದ್ಯಂತ ನವರಾತ್ರಿ ದಸರಾ ಸಂಭ್ರಮ ಮನೆಮಾಡಿದೆ..ಎಲ್ಲ ಕಡೆಗಳಲ್ಲೂ ದುರ್ಗಾ ಪೂಜೆ, ಆಯುಧಪೂಜೆ ಭರ್ಜರಿಯಾಗಿ ನಡೆಯುತ್ತಿದೆ.. ನಾಳೆ ಮಂಗಳವಾರ ಹಾಗೂ ಬುಧವಾರ ಸರ್ಕಾರಿ ರಜೆ ಇರುವ ಕಾರಣ ಸರ್ಕಾರಿ ಕಚೇರಿಗಳಲ್ಲಿ ಇವತ್ತೇ ಪೂಜೆಯ ಸಂಭ್ರಮ ಮನೆಮಾಡಿತ್ತು.. ಶಕ್ತಿ ಸೌಧ ವಿಧಾನಸೌಧದಲ್ಲಿ ಸಚಿವಾಲಯದ ಸಿಬ್ಬಂದಿಗಳು, ಹಲವು ಸಚಿವರ ಕಚೇರಿಗಳ ಸಿಬ್ಬಂದಿಗಳು, ಮುಖ್ಯಮಂತ್ರಿಗಳ ಕಚೇರಿ ಎಲ್ಲಾ ಕಡೆಗಳಲ್ಲೂ ಹಬ್ಬದ ಸಡಗರ.. ವಿಧಾನಸೌಧದ ಬಹುತೇಕ ಎಲ್ಲಾ ಕಚೇರಿಗಳನ್ನೂ ತಳಿರುತೋರಣ , ಹೂವುಗಳಿಂದ ಶೃಂಗರಿಸಲಾಗಿತ್ತು. ರಂಗೋಲಿಗಳು ಶೋಭಿಸುತ್ತಿದ್ದವು. ಮಹಿಳೆಯರು ಸಾಂಪ್ರದಾಯಿಕ ಉಡುಪು ಧರಿಸಿ ಬಂದು ಸಂಭ್ರಮಿಸಿದರು.. ಎಲ್ಲೆಡೆ ಪೂಜೆ,ಪ್ರಸಾದ ವಿತರಣೆಯದ್ದೇ ಕಲರವ.. ಶಕ್ತಿ ಸೌಧದ ಹಬ್ಬದ ವಾತಾವರಣ ಹೇಗಿತ್ತು ಎಂಬುದರ ಕುರಿತ ವಿಶೇಷ ವರದಿ ಇಲ್ಲಿದೆ...
PublicNext
03/10/2022 08:35 pm