ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಶಾಲಾ ಮಕ್ಕಳಿಂದ ಬಸ್ ತಡೆದು ಪ್ರತಿಭಟನೆ

ಗದಗ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಹಂಗನಕಟ್ಟಿ ಗ್ರಾಮದ ಕ್ರಾಸ್ ಬಳಿ ಮುಂಡರಗಿ ಡಿಪೋದಿಂದ ಬರುವ ಬಸ್ಸ್ ನಿಲ್ಲಿಸದೆ ಹಾಗೆಯೇ ಶಿರಹಟ್ಟಿಗೆ ಬಂದಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಬಸ್ಸ್ ತಡೆದು ಪ್ರತಿಭಟನೆ ಮಾಡಿರುವ ಘಟನೆ ಜರುಗಿದೆ.

ವಿದ್ಯಾರ್ಥಿಗಳನ್ನು ನೋಡಿದ ತಕ್ಷಣವೇ ಬಸ್ಸಗಳು ನಿಲ್ಲುವುದಿಲ್ಲ ಯಾಕೆಂದರೆ ಬಸ್ಸ್ ಪಾಸ್ ಹೊಂದಿರುತ್ತಾರೆ. ಇದನ್ನು ಮನಗಂಡ ವಿದ್ಯಾರ್ಥಿಗಳು ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ಮಾಡಿದರು ನಂತರ ಶಿರಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ ಗಂಗಳ ವಿದ್ಯಾರ್ಥಿಗಳ ಜೊತೆ ಹಾಗೂ ಫೋನಿನಲ್ಲಿ ಡಿಪೋ ಮ್ಯಾನೇಜರ್ ಜೊತೆ ಮಾತನಾಡಿದಕ್ಕೆ ಪ್ರತಿಭಟನೆ ಕೈ ಬಿಟ್ಟರು.

Edited By : PublicNext Desk
Kshetra Samachara

Kshetra Samachara

11/08/2022 04:33 pm

Cinque Terre

1.7 K

Cinque Terre

0

ಸಂಬಂಧಿತ ಸುದ್ದಿ