ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಹಾರಾಣಿ ಕ್ಲಸ್ಟರ್ ಕಾಲೇಜಿನಲ್ಲಿ ಮತ್ತೆ ವಿದ್ಯಾರ್ಥಿಗಳ ಪ್ರತಿಭಟನೆ

ವರದಿ: ಗೀತಾಂಜಲಿ

ಬೆಂಗಳೂರು: ಪರೀಕ್ಷಾ ಶುಲ್ಕ ಹೆಚ್ಚಳದಿಂದ ಬೇಸತ್ತ ವಿದ್ಯಾರ್ಥಿಗಳು ಕಳೆದ 2 ದಿನಗಳಿಂದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯವನ್ನು ಬಂದ್ ಮಾಡಲು ಮುಂದಾಗಿದ್ರು. ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದ್ದಕ್ಕೆ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದು, ಇಂದು ತರಗತಿ ಬಹಿಷ್ಕರಿಸಿ ವಿದ್ಯಾರ್ಥಿನಿಯರು ಬಂದ್‌ಗೆ ಮುಂದಾಗಿದ್ದರು. SUI ವಿದ್ಯಾರ್ಥಿ ಸಂಘಟನೆಯಿಂದ ವಿದ್ಯಾರ್ಥಿನಿಂದ ಬಂದ್ ಗೆ ಕರೆ ನೀಡಲಾಗಿತ್ತು.

ಆದ್ರೆ ಕಾಲೇಜು ಆಡಳಿತ ಮಂಡಳಿ ಅವರು ವಿದ್ಯಾರ್ಥಿಗಳನ್ನು ಬೆದರಿಸಿ, ತರಗತಿಗೆ ಹಾಜರಾಗುವಂತೆ ಒತ್ತಡ ಹೇರಿದ್ದಾರೆ. ಒತ್ತಡ ಪೂರ್ವಕವಾಗಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವಂತೆ ಮಾಡಿದ್ದಾರೆ. ಇನ್ನು ಪ್ರತಿಭಟನೆ ಭಾಗಿಯಾಗೋ ವಿದ್ಯಾರ್ಥಿಗಳ ಇಂಟರ್ನಲ್ ಮಾರ್ಕ್ಸ್ ಅನ್ನು ಕಡಿತಗೊಳಿಸೋದಾಗಿ ಬೆದರಿಕೆ ಹಾಕಿದ್ದಾರೆ.

ಬಿಕಾಂ, ಬಿಬಿಎ ಹಾಗೂ ಬಿಎ ಪರೀಕ್ಷಾ ಶುಲ್ಕ ಕಡಿತಕ್ಕೆ ಆಗ್ರಹಿಸಿ ಕಳೆದ 2 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿನಿಯರು, ಇಂದು ಕಾಲೇಜು ಬಂದ್ ಮಾಡಲು ಮುಂದಾಗಿದ್ರು. ಆದ್ರೆ ಕಾಲೇಜು ಆಡಳಿತ ಮಂಡಳಿ ಮಾತ್ರ ವಿದ್ಯಾರ್ಥಿಗಳ ಮನವಿಗೆ ಕಿವಿಗೊಡುತ್ತಿಲ್ಲ. ಪರೀಕ್ಷಾ ಶುಲ್ಕ ಇಳಿಸಲು ಒಪ್ಪದೇ. ಬ್ಲ್ಯಾಕ್ ಮೇಲ್ ಮಾಡೋ ತಂತ್ರದ ಮೊರೆ ಹೋಗಿದ್ದಾರೆ.

Edited By :
Kshetra Samachara

Kshetra Samachara

15/07/2022 08:32 pm

Cinque Terre

816

Cinque Terre

0

ಸಂಬಂಧಿತ ಸುದ್ದಿ